ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಲ ಸೀಮೆಯಲ್ಲಿ ಬನ್ನಂಜೆ ರಾಜಾ vs ಮುಂಬೈ ಗ್ಯಾಂಗ್

By Mahesh
|
Google Oneindia Kannada News

Janardhan reddy
ಬಳ್ಳಾರಿ, ಅ.18: ಜನಾರ್ದನ ರೆಡ್ಡಿ ಜೈಲು ಸೇರಿದರೂ ಅವರ ಸಂಸ್ಥಾನದ ಸೇನಾನಿಗಳು ಇನ್ನೂ ಬಳ್ಳಾರಿಯಲ್ಲಿದ್ದಾರೆ. ಶ್ರೀರಾಮುಲು, ಶಾಸಕ ನಾಗೇಂದ್ರ, ಸುರೇಶ್ ಬಾಬು ಸೇರಿದಂತೆ ರೆಡ್ಡಿಗಳ ಬಂಟರು ಎಲ್ಲ ರೀತಿ ಹೋರಾಟಕ್ಕೂ ಹೇಳಿ ಮಾಡಿಸಿದ ವ್ಯಕ್ತಿಗಳು.

ಪರಿಸ್ಥಿತಿ ಹೀಗಿದ್ದರೂ ಮುಂಬೈ ಡಾನ್ ಗಳು ಬಳ್ಳಾರಿಯತ್ತ ಕಣ್ಣು ಹಾಕಲು ಸಾಧ್ಯವೇ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರವೂ ಸರಳವಿದೆ.

ರೆಡ್ಡಿಗಳು ತಮ್ಮ ಅಪಾರ ಆಸ್ತಿಯನ್ನು ಈಗಾಗಲೇ ಬೇರೆಡೆಗೆ ಸಾಗಿಸಿದ್ದಾರೆ ಅಥವಾ ಬೇರೆ ಸ್ಥಿತಿಗೆ ಬದಲಿಸಿದ್ದಾರೆ. ಹೀಗಾಗಿ ಮುಂಬೈ ಡಾನ್ ಗಳು ನೇರವಾಗಿ ಜನಾರ್ದನ ರೆಡ್ಡಿ ಅಂಡ್ ಫ್ಯಾಮಿಲಿ ತಂಟೆಗೆ ಹೋಗುತ್ತಿಲ್ಲ.

ಈ ಮುಂಚೆ ರೆಡ್ಡಿ ನಡೆಸುತ್ತಿದ್ದ ಹಫ್ತಾ ವಸೂಲಿಗೆ ಸಿಬಿಐ ಬ್ರೇಕ್ ಆಗಿದೆ. ಹೀಗಾಗಿ ಅಳಿದುಳಿದಿರುವ ಗಣಿಧಣಿಗಳು, ಶ್ರೀಮಂತ ಬಿಲ್ಡರ್ ಗಳ ಮೇಲೆ ಮುಂಬೈ ಸೇನೆ ದಾಳಿ ನಡೆಸುತ್ತಿದೆ.

ಮುಂಬೈ vs ಬಳ್ಳಾರಿ: ಆದರೆ, ಸ್ಥಳೀಯ ಗೂಂಡಾ, ರೌಡಿ ಹಾಗೂ ಪುಡಿ ಡಾನ್ ಗಳು ಮುಂಬೈ ಸೇನೆ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಬನ್ನಂಜೆ ರಾಜ, ಕಾಳಿ ಯೋಗಿಶ್, ಕೊರಗ ಶೆಟ್ಟಿ ಗ್ಯಾಂಗ್ ನಿಂದ ಭಾರಿ ಪ್ರತಿರೋಧ ಎದುರಾಗಲಿದೆ. ಅಲ್ಲದೆ ರಾಯಲಸೀಮೆಯ ಅಂಧ್ರ ರೌಡಿಗಳ ಕಾಟವನ್ನು ಸಹಿಸಬೇಕಾಗುತ್ತದೆ.

ಆದರೆ, ಇದನ್ನು ಸೈಡ್ ಬಿಸಿನೆಸ್ ರೀತಿ ಟ್ರೀಟ್ ಮಾಡುತ್ತಿರುವ ಮುಂಬೈ ಭೂಗತ ಜಗತ್ತು ಬಳ್ಳಾರಿ ಬಿಸಿಲಲ್ಲಿ ತಂಪು ಪಾನಕ ಕುಡಿಯಲು ಬರುವುದು ಡೌಟು ಎಂದು ಪೊಲೀಸ ಪೇದೆಗಳ ಲೆಕ್ಕಾಚಾರ.

ಅಕಸ್ಮಾತ್ ಮುಂಬೈ ತಂಡ ಇಲ್ಲಿಗೆ ಬಂದು ಇಲ್ಲಿನ ಡಾನ್ ಗಳ ಜೊತೆ ಹೊಡೆದಾಟ ನಡೆಸಿ ಗ್ಯಾಂಗ್ ವಾರ್ ನಲ್ಲಿ ಒಂದು ತಂಡ ನಾಶವಾದರೆ ಪೊಲೀಸರು ರಂಗ ಪ್ರವೇಶಕ್ಕೆ ವೇದಿಕೆ ಸಜ್ಜಾಗುತ್ತದೆ.

ದೇಶದಲ್ಲಿ ಸಿಗುವ ಕಬ್ಬಿಣ ಅದಿರಿನ ಕಾಲು ಭಾಗದಷ್ಟು ಬಳ್ಳಾರಿಯಲ್ಳೇ ಇದೆ. ಆಸ್ಟ್ರೇಲಿಯಾ ಹಾಗೂ ಬ್ರೆಜಿಲ್ ಬಿಟ್ಟರೆ ಕರ್ನಾಟಕದಲ್ಲೇ ಶ್ರೇಷ್ಠ ಅದಿರು ಸಿಗುವುದು.

English summary
Mumbai's underworld gangs are carrying out corporate-style hafta vasool in Republic of Bellary after Mining baron Janardhana Reddy detention. Dons like Ravi Pujari and Santosh Shetty have to battle againt local goons Bannaje Raja and Rayalaseema dons to get hold of Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X