ಬಳ್ಳಾರಿ ಗಣಿಧಣಿಗಳ ಮೇಲೆ ಮುಂಬೈ ಡಾನ್ ಸವಾರಿ

Bellary Mine barons fear Mumbai Dons
ಬಳ್ಳಾರಿ, ಅ.18: ರಿಪಬ್ಲಿಕ್ ಆಫ್ ಬಳ್ಳಾರಿ ರಾಜನಿಲ್ಲದೆ ಪರದೇಶಿಗಳ ಪಾಲಾಗುತ್ತಿದೆಯೇ. ಜನಾರ್ದನ ರೆಡ್ಡಿ ಬಂಧನ ನಂತರ ಪರ ರಾಜ್ಯದವರು ಬಳ್ಳಾರಿ ಗಣಿ ಧಣಿಗಳನ್ನು ಲೂಟಿ ಮಾಡುತ್ತಿದ್ದಾರೆಯೇ? ಮುಂಬೈ ಭೂಗತ ಜಗತ್ತು ನಿಧಾನವಾಗಿ ಬಳ್ಳಾರಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ನಮ್ಮ ಉಪ್ಪಿ ಸ್ಟೈಲ್ ಕಾರ್ಪೋರೇಟ್ ಮಾದರಿ ರೌಡಿಸಂ, ಹಫ್ತಾ ವಸೂಲಿಗೆ ಇಳಿದಿರುವ ಮುಂಬೈನ ಗ್ಯಾಂಗ್ ಸ್ಟರ್ ಗಳು ಕರ್ನಾಟಕ ಹಾಗೂ ಗೋವಾ ರಾಜ್ಯದ ಕಬ್ಬಿಣ ಅದಿರಿನ ಗಣಿಯನ್ನು ಚಿನ್ನದ ಗಣಿಗಳಾಗಿ ಪರಿವರ್ತಿಸಿಕೊಂಡಿದ್ದಾರೆ.

ಮೈನಿಂಗ್ ಹಾಗೂ ರಿಯಲ್ ಎಸ್ಟೇಟ್ ಒಡೆಯರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುವುದನ್ನು ಮುಂಬೈ ಭೂಗತ ಜಗತ್ತು ಪ್ರಮುಖ ಕಾಯಕ ಮಾಡಿಕೊಂಡಿದೆ.

ಸದ್ಯಕ್ಕೆ ಮುಂಬೈ ಭೂಗತ ಜಗತ್ತಿನ ಸೈಡ್ ಬಿಸಿನೆಸ್ ಆಗಿರುವ ಬಳ್ಳಾರಿ ಹಫ್ತಾ ವಸೂಲಿ ಮುಂದೆ ದಕ್ಷಿಣದಲ್ಲಿ ಅಧಿಪತ್ಯ ಸ್ಥಾಪಿಸಲು ಬಳಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಜನಾರ್ದನ ರೆಡ್ಡಿಗಳು ಹಣಬಲದಿಂದ ಬಿಜೆಪಿ ಸರ್ಕಾರ ಸ್ಥಾಪನೆಗೆ ಕಾರಣರಾದ ಹಾಗೆ ಮುಂಬೈ ಭೂಗತ ಜಗತ್ತು ದಕ್ಷಿಣದಲ್ಲಿ ಬೇರೂರಲು ಬಳ್ಳಾರಿ ಗಣಿಧಣಿಗಳ ಹಫ್ತಾ ಹಣ ಬಳಕೆ ಯಾಗಲಿದೆ.

ಮುಂಬೈ ಗ್ಯಾಂಗ್ ನಲ್ಲಿ ಹೇಮಂತ್ ಪೂಜಾರಿ, ವಿಜಯ್ ಶೆಟ್ಟಿ, ರವಿ ಪೂಜಾರಿ ಹಾಗೂ ಸಂತೋಷ್ ಶೆಟ್ಟಿ ಪ್ರಮುಖರು. ಶ್ರೀಮಂತ ಕುಳಗಳಿಗೆ ಬೆದರಿಕೆ ಕರೆ ಮಾಡಿ ಹಣ ಪಡೆಯುವಲ್ಲಿ ನಿಪುಣರು. ಕರ್ನಾಟಕ ಮೂಲದ ಈ ಡಾನ್ ಗಳಿಗೆ ಇಲ್ಲಿ ಸ್ಥಳೀಯರ ಸಹಕಾರವೂ ಸಿಗುತ್ತಿದೆ ಎಂದು ಆಂಗ್ಲ ಪತ್ರಿಕೆ ಹೇಳಿಕೊಂಡಿದೆ.

ಅಯ್ಯೋ ಮುಂದೇನು ಗತಿ.. ಇಲ್ಲಿ ಡಾನ್ ಗಳ ಸಫೋರ್ಟ್ ಇದ್ಯಾ? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+