ಗುರುವಾರ ಸಂಜೆ 4 ಗಂಟೆಗೆ ಮೆಟ್ರೋ ಹತ್ತಲು ರೆಡಿನಾ?

ಆದರೆ, ಅ.20 ರಂದು ಬೆಳಗ್ಗೆ 10.30ಕ್ಕೆ ಎಂಜಿ ರಸ್ತೆ ಬಳಿಯ ಫೀಲ್ಡ್ ಮಾರ್ಷಲ್ ಮಾನೇಕ್ ಶಾ ಪರೇಡ್ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಧ್ಯಾಹ್ನ 2 ಗಂಟೆವರೆಗೂ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆಯಿದೆ.
* ಮಧ್ಯಾಹ್ನ ಮೂರು ಗಂಟೆ ನಂತರ ಸ್ಮಾರ್ಟ್ ಕಾರ್ಡ್ ಉಳ್ಳವರು ಹಾಗೂ ಇತರೆ ಪ್ರಯಾಣಿಕರಿಗೆ ಟಿಕೆಟ್ ಖರೀದಿ ಅವಕಾಶ ನೀಡಲಾಗುತ್ತದೆ.
* ಎಂಜಿ ರಸ್ತೆಯಿಂದ ಟ್ರಿನಿಟಿ ಸರ್ಕಲ್, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ಭೈಯಪ್ಪನಹಳ್ಳಿ ತಲುಪಲಿದೆ.
* ಪ್ರತಿ ನಿಲ್ದಾಣದಲ್ಲೂ 30 ಸೆಕೆಂಡುಗಳ ಕಾಲ ಮಾತ್ರ ನಿಲುಗಡೆ ಇರುತ್ತದೆ.
* ರಾತ್ರಿ 10 ಗಂಟೆ ವರೆಗೂ ಮೆಟ್ರೋ ರೈಲು ಸಂಚರಿಸಲಿದೆ. ಟಿಕೆಟ್ ಕೌಂಟರ್ 9.50 ಗಂಟೆ ತನಕ ಕಾರ್ಯ ನಿರ್ವಹಿಸಲಿದೆ.
* ಅಗತ್ಯಬಿದ್ದರೆ 11 ಗಂಟೆಗೆ ವಿಶೇಷ ಪ್ರಯಾಣ ಸೌಲಭ್ಯ ಒದಗಿಸಲಾಗುವುದು.
* ಅ.21ರಿಂದ ಎಂಜಿ ರಸ್ತೆ ಹಾಗೂ ಭೈಯಪ್ಪನ ಹಳ್ಳಿ ನಡುವೆ ಬೆಳಗ್ಗೆ 6 ಗಂಟೆಗೆ ಮೆಟ್ರೋ ತನ್ನ ಸಂಚಾರ ಆರಂಭಿಸಲಿದೆ.
* ಬೆಳಗ್ಗೆ 6 ರಿಂದ 8 ಗಂಟೆ ಪ್ರತಿ 15 ನಿಮಿಷಕ್ಕೆ ಒಂದು
* ಬೆಳಗ್ಗೆ 8 ರಿಂದ ರಾತ್ರಿ 8 ಪ್ರತಿ 10 ನಿಮಿಷಕ್ಕೆ ಒಂದು
* ರಾತ್ರಿ 8 ರಿಂದ 10 ಸಮಯದಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಮೆಟ್ರೋ ರೈಲು ಪ್ರಯಾಣಿಕರ ಸೇವೆಗೆ ಸಿಗಲಿದೆ.











Click it and Unblock the Notifications