ಯಡ್ಡಿ ಜೈಲಿಗೆ- ರೆಡ್ಡಿ ಜಾಲಿ ಮೂಡಿಗೆ

ಹಿಂದೆಂದಿಗಿಂತ ಇಂದೇಕೋ ಹೆಚ್ಚು ಸಮಾಧಾನದಲ್ಲಿದ್ದಂತೆ ಕಂಡುಬಂದರು. ಬೆಳಗ್ಗೆ 5.30ಕ್ಕೆ ನಿದ್ದೆಯಿಂದ ಎದ್ದ ರೆಡ್ಡಿಗಾರು ಪತ್ರಿಗೆಳನ್ನು ಓದಿ ಮುಗಿಸಿದರು. ಬಳಿಕ ಕಳೆದ 40 ದಿನಗಳಿಂದ ಅಳವಡಿಸಿಕೊಂಡಿರುವ ರೂಢಿಯಂತೆ ವಾಯುವಿಹಾರಕ್ಕೆ ಮೀಸಲಾದರು. ಅದಾಗುತ್ತಿದ್ದಂತೆ ಹೊಟ್ಟೆ ಚುರುಗುಟ್ಟಿ ತಿಂಡಿ ಶಾಸ್ತ್ರ ಮುಗಿಸಿದರು. ಒಂದಷ್ಟು ರಿಲ್ಯಾಖ್ಸ್ ಮೂಡಿಗೆ ಬಂದ ರೆಡ್ಡಿ ಟಿವಿ ಸ್ವಚ್ ಆನ್ ಮಾಡಿದ್ದಾರೆ. ಆಗ ...
ತೆಲುಗು ಚಾನಲ್ಲೊಂದರಲ್ಲಿ ಬಿತ್ತರವಾಗುತ್ತಿತ್ತು -ಇಂದೇ ಯಡ್ಡಿ ಬಂಧನ ಬಹುತೇಕ ಖಚಿತ ಎಂಬ ಸುದ್ದಿ. ಆಗ ಸ್ವಲ್ಪ ಹೊತ್ತು ಜೈಲಧಿಕಾರಿಗಳೊಂದಿಗೆ ಅವರು ಹರಟೆ ಹೊಡೆದರು. ತದನಂತರ ಜೈಲಿನೊಳಗೆ ಸಹ ಕೈದಿಗಳ ಜತೆ ಬ್ಯಾಡ್ಮಿಂಟನ್ ಆಟವಾಡಿದರು ಎಂದು ಮೂಲಗಳು ಹೇಳಿವೆ. ಆದರೆ ರೆಡ್ಡಿಯ ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮತ್ತೊಂದು ಕುತೂಹಲದ ಅಂಶವೆಂದರೆ ರೆಡ್ಡಿ ಎಂದಿನಂತೆ ಮಧ್ಯಾಹ್ನ ಏಕಾಂಗಿಯಾಗಿ ಊಟ ಮಾಡದೆ ಸಹ ಕೈದಿಗಳೊಂದಿಗೆ ಸೇವಿಸಿದ್ದು ಇಂದಿನ ಊಟದ ಸ್ಪಷ್ಟಲ್ ಆಗಿತ್ತು.












Click it and Unblock the Notifications