ಯಡಿಯೂರಪ್ಪಗೆ ಪರಾಜಯವಲ್ಲ, ವಕೀಲರಿಗೆ ಹಿನ್ನಡೆ

ಆದರೆ, ಆದದ್ದೇ ಬೇರೆ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರು ಹೀರೋ ಆದರೆ ಅವರ ಮುಂದೆ ಯಡಿಯೂರಪ್ಪ ಪರ ವಕೀಲರು ಜೀರೋ ಆದರು.
ಯಡಿಯೂರಪ್ಪ ಅವರ ಹಿಂದೆ ಸುಪ್ರಿಂಕೋರ್ಟ್‌ನ ಹಿರಿಯ ವಕೀಲರಾದ ರಾಮ್‌ಜೇಠ್ಮಲಾನಿ, ಉದಯ್ ಲಲಿತ್, ರಾಜ್ಯ ಹೈಕೋರ್ಟ್‌ನ ರವಿ ಬಿ.ನಾಯಕ್, ಸಿ.ವಿ.ನಾಗೇಶ್, ಜೈಕುಮಾರ್ ಪಾಟೀಲ್, ಟಾಮಿ ಸೆಬಾಸ್ಟಿಯನ್, ಸಂದೀಪ್ ಪಟೇಲ್ ಮಂತಾದ ಅತಿರಥ ಮಹಾರಥ ವಕೀಲರುಗಳ ಪಡೆಯಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲೇ ಸಿರಾಜಿನ್ ಬಾಷಾ ಅವರು ಮೊದಲ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿದ್ದಂತೆ ಯಡಿಯೂರಪ್ಪ ಅವರು ಹಿರಿಯ ವಕೀಲರನ್ನು ತಮ್ಮ ಸಮರ್ಥನೆಗಾಗಿ ನೇಮಿಸಿಕೊಂಡಿದ್ದರು.
ಜಾಮೀನು ಅರ್ಜಿ ವಜಾ ಕೊಂಡಿದ್ದು ಸಂತಸ ತಂದ ಬೆನ್ನಲ್ಲೇ ಬಂಧನದ ಬಗ್ಗೆ ಯಾರೂ ತಲೆ ಕೆಡಸಿಕೊಳ್ಳದೆ ಜಾಮೀನು ಸಿಗುವ ಬಗ್ಗೆ ಅತಿಯಾದ ಭರವಸೆ ಹೊಂದಿದ್ದು ಮುಳುವಾಗಿದೆ.
ಹೈಕೋರ್ಟ್ ನಲ್ಲಿ ಸಮನ್ಸ್ ರದ್ದು ಮಾಡಲು ಆದೇಶ ಹೊರಬೀಳಲಿಲ್ಲ ಹಾಗೂ ಲೋಕಾಯುಕ್ತ ಕೋರ್ಟ್‌ನ ವಿಚಾರಣೆಗೆ ತಡೆಯಾಜ್ಞೆ ಕೂಡಾ ಸಿಗಲಿಲ್ಲ.
ಸಿರಾಜಿನ್ ಬಾಷಾರ ಎರಡನೆ ಮತ್ತು ಮೂರನೇ ದೂರಿನ ರದ್ದು ವಿಚಾರಣೆ ನಡೆಯಬೇಕಿದೆ. ಇದು ಯಡಿಯೂರಪ್ಪ ಅವರ ವಕೀಲರ ತಂಡದ ಬಹುದೊಡ್ಡ ಸೋಲು ಎಂದು ಕೋರ್ಟ್ ಆವರಣದಲ್ಲಿ ಸುದ್ದಿಯಾಗುತ್ತಿದೆ.
ಯಾವುದೇ ಲಾ ಪಾಯಿಂಟ್ ಕೂಡಾ ಯಡಿಯೂರಪ್ಪ ಅವರನ್ನು ಜೈಲು ಪಾಲಾಗುವುದರಿಂದ ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ಅನಾರೋಗ್ಯ ನೆಪವೊಡ್ಡಲು ಕೂಡಾ ಸಮಯಾವಕಾಶ ಇಲ್ಲದಂತೆ ಎಲ್ಲವೂ ಘಟಿಸಿದ್ದು ಘಟಾನು ಘಟಿ ವಕೀಲರಿಗೂ ದಿಕ್ಕುತೋಚದಂತೆ ಮಾಡಿಬಿಟ್ಟಿದೆ.












Click it and Unblock the Notifications