ಯಡ್ಡಿಗೆ ಜಾಮೀನು ಕೋರಿ ಮತ್ತೆ ಅ.17ರಂದು ಅರ್ಜಿ

ಲೋಕಾಯುಕ್ತ ವಿಶೇಷ ಕೋರ್ಟಿನ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿ, ಅ.17ರಂದು ಜಾಮೀನು ಅರ್ಜಿ ಸಲ್ಲಿಸುತ್ತೇವೆ. ಸಿರಾಜಿನ್ ಬಾಷಾ ಪರ ಕಾಣದ ಕೈಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಸಿರಾಜಿನ್ ಹಾಗೂ ಅವರ ವಕೀಲರಿಗೆ ದೊಡ್ಡ ಮೊತ್ತದ ಹಣಕಾಸಿನ ನೆರವು ನೀಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತವಾದ ದೂರು ಎಂದು ಹಲವು ನಿದರ್ಶನಗಳ ಮೂಲಕ ಸಾಬೀತುಪಡಿಸಬಹುದಾಗಿದೆ.
ಯಡ್ಡಿ ವಿರೋಧಿ ಬಣ ಕೈವಾಡ: ಸಾಮಾನ್ಯ ವಕೀಲರಾದ ಸಿರಾಜಿನ್ ಬಾಷಾ ಅವರು ಆರ್ಥಿಕ ನೆರವಿಲ್ಲದೆ ಇಷ್ಟು ದಿನಗಳವರೆಗೂ ಕೇಸ್ ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ.
ಯಡಿಯೂರಪ್ಪ ವಿರೋಧಿ ಅನಂತ್ ಬಣ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ಶಾಮೀಲಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹೈಕೋರ್ಟ್ ನಲ್ಲಿ ಜಾಮೀನು ಸಿಗುವ ನಿರೀಕ್ಷೆಯಿದೆ ಎಂದು ವಕೀಲ ರವಿ ನಾಯ್ಕ್ ಹೇಳಿದ್ದಾರೆ.












Click it and Unblock the Notifications