ಯಡ್ಡಿ ಕುಶಲೋಪರಿಗೆ ಜಯದೇವ ಆಸ್ಪತ್ರೆಯತ್ತ ದೌಡಾಯಿಸಿದ ಶೋಭಾ
ಬೆಂಗಳೂರು,
ಅ.16: ಯಜಮಾನ್ ಯಡ್ಡಿಯೂರಪ್ಪನವರಿಗೆ ಜೈಲಿನಲ್ಲಿ ಆರೋಗ್ಯ ಕೈಕೊಟ್ಟು (ಕೈಹಿಡಿದು?) ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಎದ್ನೋ ಬಿದ್ನೋ ಎಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. id="toptextpromo">ಬೆಳಗ್ಗೆ
ತಿಂಡಿ ಮಾಡುವುದಕ್ಕೂ ಮೊದಲೇ ಆಸ್ಪತ್ರೆಗೆ ಹೊರಟು ನಿಂತ ಶೋಭಾ ಕರಂದ್ಲಾಜೆ ಅವರ ಜತೆಗೂಡಿ ಇಡೀ ಸಂಪುಟ ಪಟಾಲಂ ಜಯದೇವ ಆಸ್ಪತ್ರೆಗೆ ತೆರಳಿ, ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಅಶೋಕ್, ಸೋಮಣ್ಣ, ಬಿ. ಸುರೇಶ್ ಗೌಡ, ಬಸವರಾಜ್ ಬೊಮ್ಮಾಯಿ, ಹಾಲಪ್ಪ, ಬಚ್ಚೇಗೌಡ, ಸುರೇಶ್ ಕುಮಾರ್ ಸೇರಿದಂತೆ ಬಹುತೇಕ ಮಂತ್ರಿಗಳ ದಂಡು ಇದೀಗ ಜಯದೇವ ಆಸ್ಪತ್ರೆಯಲ್ಲಿ ಬೀಡುಬಿಟ್ಟಿದೆ. id='are-slot-1' class='oiad oi-axt oiadv'> id='top-searched-articles'>ಇದು
ಅಲ್ಲಿನ ಜನರಿಗೆ ಪುಕ್ಕಟೆ ಮನರಂಜನೆಯಾಗಿದ್ದರೆ ಹೃದ್ರೋಗಿಗಳ ಎದೆ ಬಡಿತ ಹೆಚ್ಚಿಸಿದೆ. ಇದೇ ವೇಳೆ, ತಮ್ಮ ಮುಖ್ಯಮಂತ್ರಿ ಖುರ್ಚಿಯನ್ನು ಬಿಟ್ಟುಕೊಟ್ಟು ನನ್ನನ್ನು ಅಲ್ಲಿ ಕೂರಿಸಿರುವ ಯಡಿಯೂರಪ್ಪ ಅವರನ್ನು ಇಂತಹ ಘನಳಿಗೆಯಲ್ಲಿ ನೋಡಿಕೊಂಡು ಬರಲಿಲ್ಲ ಎಂದರೆ 'ಮೆಚ್ಚನಾ ಪರಮಾತ್ಮನು' ಎಂದು ಭಾವಿಸಿದ ಸಿಎಂ ಸದಾನಂದ ಗೌಡರು ಸಹ ಸೀದಾ ಜಯದೇವಾ ತಲುಪಿದ್ದಾರೆ.











Click it and Unblock the Notifications