ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಪದ್ಮನಾಭಸ್ವಾಮಿ ಸಂಪತ್ತು 3ಡಿ ದೃಶ್ಯಗಳಲ್ಲಿ ದಾಖಲೆ

By Srinath
|
Google Oneindia Kannada News

anatha-padmanabha-temple-treasure-in-3d-visuals
ತಿರುವನಂತಪುರ,ಅ.16: ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾದ ಲಕ್ಷಾಂತರ ಕೋಟಿ ರೂ. ವೌಲ್ಯದ ಅಪಾರ ಸಂಪತ್ತಿನ ವೈಜ್ಞಾನಿಕ ದಾಖಲೀಕರಣವು ನವೆಂಬರ್ 9ರಿಂದ ಆರಂಭವಾಗಲಿದೆ. ಸುಮಾರು 1 ಲಕ್ಷ ಕೋಟಿ ರೂ. ವೌಲ್ಯವುಳ್ಳದ್ದೆಂದು ಅಂದಾಜಿಸಲಾಗಿರುವ ಈ ನಿಧಿಯ 3ಡಿ ಚಿತ್ರಗಳನ್ನು ದಾಖಲಿಸಲಾಗುವುದೆಂದು ಅಧಿಕೃತ ಮೂಲಗಳು ಹೇಳಿವೆ.

ದೇವಾಲಯದಲ್ಲಿ ಪತ್ತೆಯಾದ ಅಮೂಲ್ಯ ವಸ್ತುಗಳ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದು, ಅಮೂಲ್ಯ ನಿಧಿಯ ಕುರಿತಂತೆ ಕಂಪ್ಯೂಟರೀಕೃತ ಡಾಟಾಬೇಸ್ ರಚನೆ ಈ ದಾಖಲೀಕರಣ ಪ್ರಕ್ರಿಯೆಯಲ್ಲಿ ಒಳಗೊಂಡಿವೆ ಎಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ತಜ್ಞರ ಸಮಿತಿಯು ಶನಿವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇರಳ ರಾಜ್ಯ ಎಲೆಕ್ಟ್ರಾನಿಕ್ ನಿಗಮವು ದಾಖಲೀಕರಣ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದೆ. ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ತಾಂತ್ರಿಕ ಪರಿಣತಿಯನ್ನು ಒದಗಿಸಲಿದೆ.

ಅನಂತಪದ್ಮನಾಭ ದೇವಾಲಯದ ನಿಧಿಯ ದಾಖಲೀಕರಣ ಕಾರ್ಯದ ಪೂರ್ತಿ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ. ದಾಖಲೀಕರಣ ಪ್ರಕ್ರಿಯೆಯನ್ನು ನವೆಂಬರ್ 9ರಂದು ಆರಂಭಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಪೂರ್ವಸಿದ್ಧತೆಗಾಗಿ ನವೆಂಬರ್4ರಂದು ಇನ್ನೊಂದು ಸಭೆಯನ್ನು ಕರೆಯಲಾಗುವುದೆಂದು ತಜ್ಞರ ಸಮಿತಿಯ ಅಧ್ಯಕ್ಷರಾದ ಸಿವಿ ಆನಂದ ಬೋಸ್ ತಿಳಿಸಿದ್ದಾರೆ.

16ನೆ ಶತಮಾನದಷ್ಟು ಪುರಾತನವಾದ ಈ ದೇವಾಲಯದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಚಿನ್ನ, ವಜ್ರ ಸೇರಿದಂತೆ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಸಂಪತ್ತು ಪತ್ತೆಯಾಗಿದೆ. ಆದರೆ ಬಿ ಕೊಠಡಿಯನ್ನು ಮಾತ್ರ ಇನ್ನೂ ತೆರೆಯಲಾಗಿಲ್ಲ.

ಬಿ ಕೊಠಡಿಯನ್ನು ತೆರೆಯುವ ವಿಚಾರದಲ್ಲಿ ತನ್ನದೇ ವಿವೇಚನೆಗನುಗುಣವಾಗಿ ನಡೆಯುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಅರ್ಚಕರ ಜತೆ ಸಮಾಲೋಚಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ

English summary
Sree Anantha Padmanabhasway Temple treasure will be documented in 3D visuals from Nov 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X