ಇಂದು ಯಡಿಯೂರಪ್ಪ ಹಣೆಬರಹ, ಜೈಲಾ ಬೇಲಾ?

ಭ್ರಷ್ಟರು ಯಾರೇ ಇರಲಿ ಅವರ ಮೇಲೆ ಮೃದು ಧೋರಣೆ ಬೇಡ. ಕೆಳ ನ್ಯಾಯಾಲದಲ್ಲಿ ನಡೆಯುವ ಯಾವುದೇ ವಿಚಾರಣೆಗೆ ತಡೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಕೋರ್ಟ್ ನೀಡುವ ಆದೇಶ ಮಹತ್ವ ಪಡೆದು ಕೊಂಡಿದೆ.
ಇದೇ ಅಕ್ಟೋಬರ್ ಮೂರರಂದು ಪ್ರಕಟವಾಗಬೇಕಿದ್ದ ಯಡಿಯೂರಪ್ಪ ಅವರ ಜಾಮೀನು ಅರ್ಜಿ ಏಕ ಸದಸ್ಯ ಪೀಠದ ತಡೆಯಾಜ್ಞೆಯಿಂದಾಗಿ ಅಕ್ಟೋಬರ್ 15ಕ್ಕೆ ಮುಂದೂಡಲ್ಪಟ್ಟಿತ್ತು. ಯಡಿಯೂರಪ್ಪ ಮತ್ತು ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಒಂದು ವೇಳೆ ಪೀಠ ತಿರಸ್ಕರಿಸಿದರೆ ಮಾಜಿ ಸಿಎಂ ಕೃಷ್ಣನ ಜನ್ಮಸ್ಥಾನಕ್ಕೆ ಹೋಗುವುದು ಬಹುತೇಕ ಖಚಿತ.
ನ್ಯಾ. ಸುಧೀಂದ್ರ ರಾವ್ ಬೆಳಗ್ಗೆ ತೀರ್ಪು ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಮುಖ ಕಾರಣಕರ್ತರಾಗಿದ್ದ ಯಡಿಯೂರಪ್ಪ ಅವರ ಹಣೆಬರಹ ಜೈಲಾ ಅಥವಾ ಬೇಲಾ ಎನ್ನುವ ತೀರ್ಪು ಇಂದು ಹೊರ ಬೀಳಲಿದೆ.












Click it and Unblock the Notifications