'ಪ್ರೇಮಾ' ಕೊಂದು ಸುಟ್ಟ ಪಕ್ಕದ ಮನೆ ಪ್ರವೀಣ

ಸವದತ್ತಿ ತಾಲೂಕಿನ ಹೊಲಿಕೇರಿ ತಾಂಡಾದ ಪ್ರೇಮಾ ಮೇಲೆ ಪಕ್ಕದ ಮನೆಯ ಪ್ರವೀಣ ಹಿಂದೆಯಿಂದಲೂ ಕಣ್ಣು ಹಾಕಿದ್ದ. ಒನ್ ಸೈಡ್ ಲವ್ ಬಹು ದಿನಗಳಿಂದ ನಡೆಯುತ್ತಿತ್ತು.
ಇತ್ತೀಚೆಗೆ ಪ್ರೇಮಾಳ ಪೋಷಕರು ಆಕೆಗೆ ಬೇರೊಬ್ಬ ಹುಡುಗನನ್ನು ಗೊತ್ತು ಮಾಡಿದ್ದರು. ವಿವಾಹ ನಿಶ್ಚಯವಾದ ಮೇಲೆ ಪ್ರೇಮಾ ಕೂಡಾ ಪಕ್ಕದ ಮನೆ ಪೀಡೆ ಕಳೆಯುವುದು ಎಂದು ಎನಿಸಿದ್ದಳು
ಮದುವೆಗೆ ಇನ್ನು ಎರಡು ತಿಂಗಳಿತ್ತು. ಆದರೆ, ಅಷ್ಟರಲ್ಲಿ ಪಕ್ಕದ ಮನೆ ಪ್ರವೀಣ ಆಕೆ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ರಾತ್ರಿ ವೇಳೆ ಬಹಿರ್ದೆಸೆಗೆ ತೆರಳಿದ್ದ ಪ್ರೇಮಾ ಆಘಾತ ಅನುಭವಿಸಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ್ದ ಪಾಗಲ್ ಪ್ರೇಮಿ ಪ್ರವೀಣ ಆಕೆಯ ಕುತ್ತಿಗೆ ಹಿಸುಕಿ ಕೊಂದು ಹೊಲದಲ್ಲಿ ಕಟ್ಟಿಕೆ ಕೂಡಿಸಿ ಶವಕ್ಕೆ ಬೆಂಕಿ ಹಂಚಿ ಪರಾರಿಯಾಗಿದ್ದಾಳೆ.
ಭೀಕರ ದೃಶ್ಯ: ಬೆಳಗ್ಗೆ ಹೊಲಕ್ಕೆ ಬಂದ ಜನ ಅರೆ ಬೆರೆ ಬೆಂದ ಶವವನ್ನು ಕಂಡು ಭಯಭೀತರಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸತ್ತಿರುವುದು ಪ್ರೇಮಾ ಎಂದು ತಿಳಿದು ಬಂದಿದೆ. ಆರೋಪಿ ಪ್ರವೀಣನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications