6 ಸಾವಿರ ಮರ ಕಡಿದು 685 ಕೋಟಿ ಮಾಯಾ ಗಾರ್ಡನ್

ಶುಕ್ರವಾರ ಸಂಜೆ 5 ಗಂಟೆಗೆ ಈ ದುಬಾರಿ ಸ್ಮಾರಕದ ಉದ್ಘಾಟನೆ ನಡೆದಿದೆ. ಮಾಯಾವತಿ ಗುರು ಕಾನ್ಶಿರಾಮ್, ಡಾ. ಬಿಆರ್ ಅಂಬೇಡ್ಕರ್ ಸೇರಿದಂತೆ ಮಾಯಾವತಿ ಅವರ ಪ್ರತಿಮೆಗಳು ಈ ಗಾರ್ಡನ್ ತುಂಬಾ ಇದೆ.
2008ರಲ್ಲಿ ಆರಂಭವಾದ ಪಾರ್ಕ್ ಕಾಮಗಾರಿ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಸುಪ್ರೀಂಕೋಟ್ ಮೆಟ್ಟಿಲೇರಿದ್ದ ಪ್ರಕರಣ ಅನೇಕ 2010ರಲ್ಲಿ ಮಾಯಾವತಿ ಪರವಾಗಿತ್ತು.
ಅನೇಕ ಪರಿಸರ ನಿಯಮಗಳನ್ನು ಮುರಿಯಲಾಗಿರುವ ಈ ಗಾರ್ಡನ್ ಉದ್ಘಾಟನೆ ಸಮಾರಂಭಕ್ಕೆ 40,000ಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಿದ್ದರು, ಎಲ್ಲೆಡೆ ಬಹುಜನ ಸಮಾಜ ಪಕ್ಷದ ಬ್ಯಾನರ್ ಗಳು ಬಂಟಿಂಗ್ಸ್ ಗಳು ರಾರಾಜಿಸುತ್ತಿದೆ.
ಮುಂಬರುವ ಅಸೆಂಬ್ಲಿ ಚುನಾವಣೆಗೆ ಪೂರ್ವಭಾವಿಯಾಗಿ ಮಾಯಾ ಸರ್ಕಾರ ಸಕತ್ ತಯಾರಿ ನಡೆಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications