ಯುವಿಸಿಇಯನ್ನು ಐಐಟಿ ಮಾಡಿ, ಇನ್ಫಿ ಮೂರ್ತಿಗೆ ಆಫರ್

ಐಐಟಿ ಹಳೆ ವಿದ್ಯಾರ್ಥಿ ಆಗಿರುವ ನೀವು ಬೆಂಗಳೂರಿನ ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ತಂತ್ರಜ್ಞಾನದ ಹೊಸ ಶಖೆ ಆರಂಭಿಸಿ ಎಂದು ಪ್ರಭು ದೇವ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಬೋರ್ಡ್ ಸದಸ್ಯರಾಗಲು ನಿಮಗೆ ಆಹ್ವಾನ ನೀಡುತ್ತಿದ್ದೇವೆ. ನಿಮ್ಮ ಸಲಹೆ, ಸೂಚನೆ, ಮಾರ್ಗದರ್ಶನ ನಮಗೆ ಅಗತ್ಯವಿದೆ. ಯುವಿಸಿಇ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ನೆರವು ಬೇಕಿದೆ.
ಕರ್ನಾಟಕದಲ್ಲಿ ಐಐಟಿ ಇಲ್ಲ ಎಂಬ ಕೊರಗನ್ನು ಈ ಮೂಲಕ ನೀವು ತೀರಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ಪ್ರಭುದೇವ ಪತ್ರದಲ್ಲಿ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಿಶ್ವಬ್ಯಾಂಕ್ ನಿಂದ 22.5 ಕೋಟಿ ರು ಆರ್ಥಿಕ ನೆರವು ಸಿಕ್ಕಿದ್ದು, ಆಡಳಿತ ಮಂಡಳಿಗೆ ಹೊರಗಿನ ವ್ಯಕ್ತಿಗಳನ್ನು ಆಯ್ಕೆ ಮಾಡಬಹುದು ಎಂದು ಸೂಚಿಸಿದೆ. ನಾರಾಯಣ ಮೂರ್ತಿ ಅವರು ಒಪ್ಪಿಗೆ ನೀಡಿದರೆ ತುಂಬಾ ಸಂತೋಷ ಎಂದು ಯುವಿಸಿಇ ಪ್ರಿನ್ಸಿಪಾಲ್ ಕೆ.ಆರ್ ವೇಣು ಗೋಪಾಲ್ ಹೇಳಿದ್ದಾರೆ.
ಎನ್ ಆರ್ ನಾರಾಯಣ ಮೂರ್ತಿ ಅವರು ರಾಷ್ಟ್ರಪತಿ ಹುದ್ದೆ ಬಯಸಿದ ನಂತರ ಈ ಹೊಸ ಆಫರ್ ಬಗ್ಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications