ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೋ ನನ್ನ ಸ್ಪಷ್ಟನೆ, ಭ್ರಷ್ಟರಿಗೆ ನೀಡ್ಬೇಡಿ ರಕ್ಷಣೆ

By Mahesh
|
Google Oneindia Kannada News

Justice Santosh Hegde
ಬೆಂಗಳೂರು, ಅ.14: ಅಕ್ರಮ ಗಣಿಗಾರಿಕೆಯ ಕುರಿತು ಲೋಕಾಯುಕ್ತ ಸಂಸ್ಥೆ ಸಲ್ಲಿಸಿರುವ ವರದಿಯಲ್ಲಿನ ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಕೋರಿದ್ದ ಸರ್ಕಾರಕ್ಕೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಶುಕ್ರವಾರ ಉತ್ತರಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಮಧ್ನಾಹ್ನ ಸುಮಾರು 3 ಗಂಟೆಗೆ ಪ್ರತಿಕಾಗೋಷ್ಠಿ ನಡೆಸಿದ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಲೋಕಾಯುಕ್ತನಾಗಿ ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿದ್ದೇನೆ. ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಶಿಫಾರಸ್ಸು ಮಾಡುವ ಅಧಿಕಾರ ಲೋಕಾಯುಕ್ತ ಸಂಸ್ಥೆಗಿದೆ ಎಂದರು.

* ಲೋಕಾಯುಕ್ತ ಕಾಯ್ದೆ 17(ಎ) ಪ್ರಕಾರ ಸಚಿವರು, ಶಾಸಕರನ್ನು ತನಿಖೆಗೆ ಒಳಪಡಿಸಬಹುದು. ಜನಾರ್ದನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಅವರು ವಿಚಾರಣಾತೀತರಾಗಲು ಸಾಧ್ಯವಿಲ್ಲ.
* ಗಣಿ ಅಕ್ರಮದ ಬಗ್ಗೆ ನೀಡಿರುವ ಎಲ್ಲಾ ದಾಖಲೆಗಳು ಸಮರ್ಪಕವಾಗಿದ್ದು, ಲೋಕಾಯುಕ್ತ ಕಾಯ್ದೆಗೆ ಅನುಗುಣವಾಗಿದೆ.
* ತನಿಖಾ ವರದಿ ತಯಾರಿಸುವಾಗ ಅಥವಾ ಆರೋಪಿಗಳ ವಜಾ ಮಾಡುವಂತೆ ಶಿಫಾರಸ್ಸು ಮಾಡುವ ಮುನ್ನ ನೋಟಿಸ್ ನೀಡುವ ಅವಶ್ಯಕತೆ ಇಲ್ಲ.

ಅಕ್ರಮ ಗಣಿಗಾರಿಕೆಯ ಕುರಿತು ಲೋಕಾಯುಕ್ತರು ಸರಕಾರಕ್ಕೆ ಸಲ್ಲಿಸಿ ರುವ ವರದಿಯಲ್ಲಿ ಅಧಿಕಾರೇತರ ವ್ಯಕ್ತಿ (ಶಾಸಕರು, ಸಚಿವರು)ಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವ ಅಧಿಕಾರದ ಕುರಿತು ಪ್ರಶ್ನಿಸಲಾಗಿದೆ. ಇದಕ್ಕೆ ಸಮರ್ಪಕ ಉತ್ತರ ನೀಡಿದ್ದೇನೆ.

ವರದಿಯನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವ ಅಧಿಕಾರ ಸಚಿವ ಸಂಪುಟಕ್ಕಿದೆ. ಶಿಫಾರಸು ಮಾಡುವುದು ನಮ್ಮ ಕರ್ತವ್ಯ ಎಂದು ಸಂತೋಷ್ ಹೆಗ್ಡೆ ಪುನರುಚ್ಚರಿಸಿದರು.

English summary
Former Lokayukta Justice N Santosh Hegde today (Oct.14) has given clarification to queries raised by the BJP Government on Lokayukta report related to Illegal Mining in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X