ಹೆಗ್ಡೆ ಅವರಿಗೆ ಸುರೇಶ್ ಜೀ ಕೇಳಿದ್ದ ಪ್ರಶ್ನೆಗಳು

Minister Suresh Kumar
ಬೆಂಗಳೂರು, ಅ.13: ಅಕ್ರಮ ಗಣಿಗಾರಿಕೆಯ ಕುರಿತ ಸ್ಪಷ್ಟೀಕರಣ ಕೋರಿದ್ದ ಬಿಜೆಪಿ ಸರ್ಕಾರದ ಪರವಾಗಿ ನಿಕಟಪೂರ್ವ ಸಂತೋಷ್ ಹೆಗ್ಡೆ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಕೇಳಿದ ಪ್ರಶ್ನೆಗಳು ಇಲ್ಲಿವೆ.

* ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಕಾಯ್ದೆ 7 (2) (ಎ) ಅಡಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ. ಆದರೆ, ಲೋಕಾಯುಕ್ತರು ಸರಕಾರಕ್ಕೆ ವರದಿ ಸಲ್ಲಿಸುವಾಗ ಸೆಕ್ಷನ್ 13ರಡಿಯಲ್ಲಿ ಶಿಫಾರಸು ಬಗ್ಗೆ ಸ್ಪಷ್ಟನೆ ಬೇಕಿದೆ.

* ತನಿಖೆಯ ವೇಳೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲ್ಲ ಏಕೆ? ಜನಪ್ರತಿನಿಧಿಗಳ ಅಭಿಪ್ರಾಯವನ್ನು ಪಡೆಯದೆ ಸಹಜ ನ್ಯಾಯವನ್ನು ಪಾಲಿಸಿಲ್ಲ ಏಕೆ?
* ಲೋಕಾಯುಕ್ತರ ವರದಿಯಲ್ಲಿ ಅಧಿಕಾರಿ ಹಾಗೂ ಅಧಿಕಾರೇತರ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿರುವ ಕ್ರಮದ ಬಗ್ಗೆ ವಿವರಿಸಿ.

ಅಧಿಕಾರೇತರ ವ್ಯಕ್ತಿಗಳ ವಿಭಾಗದಲ್ಲಿ ಶಾಸಕರು, ಮಂತ್ರಿಗಳು, ರಾಜಕೀಯ ನಾಯಕರು ಬರುತ್ತಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ಅಡ್ವೊಕೇಟ್ ಜನರಲ್ ಸೇರಿದಂತೆ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಅಭಿಪ್ರಾಯ ಪಡೆಯಬೇಕಿದೆ.

ಸಂವಿಧಾನದ ಸೆಕ್ಷನ್ 164ನೆ ಪ್ರಕಾರ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯ ಶಿಫಾರಸಿನ ಮೇಲೆ ಸಚಿವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ.

ಅಲ್ಲದೆ, 191ನೆ ಸೆಕ್ಷನ್‌ನಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ಗೆ ಆಯ್ಕೆಯಾಗಬೇಕಾದವರಿಗೆ ಇರಬೇಕಾದ ಅರ್ಹತೆಗಳ ಕುರಿತು ಹೇಳಲಾಗಿದೆ.

ಆದರೆ, ಲೋಕಾಯುಕ್ತರು ಜನಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ಕುರಿತು ಸ್ಪಷ್ಟನೆ ನೀಡಿಲ್ಲ.

ತಪ್ಪಿತಸ್ಥರನ್ನು ರಕ್ಷಿಸುವ ಉದ್ದೇಶ ಸರಕಾರಕ್ಕಿಲ್ಲ. ಆದರೆ, ಸಂವಿಧಾನ ಹಾಗೂ ಲೋಕಾಯುಕ್ತ ಕಾಯ್ದೆಯ ನಡುವೆ ಗೊಂದಲಗಳು ಏರ್ಪಡಬಾರದು ಎಂಬ ಉದ್ದೇಶದಿಂದ, ವರದಿಯಲ್ಲಿನ ಶಿಫಾರಸುಗಳ ಕುರಿತು ಸಲಹೆ ಪಡೆಯಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ವರದಿಯಲ್ಲಿ ಹೆಸರಿಸಲಾಗಿರುವ 700ಕ್ಕೂ ಹೆಚ್ಚು ಅಧಿಕಾರಿಗಲ ಭವಿಷ್ಯದ ಬಗ್ಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯ ನೇತೃತ್ವದ ಸಮಿತಿಯು ಇನ್ನೆರಡು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಸುರೇಶ್‌ಕುಮಾರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+