ಮಕ್ಕಳ ಅಪಹರಣಕ್ಕೆ ಬಂದ ಮಹಿಳೆಯರಿಗೆ ಗೂಸಾ

ಗುರುಮಿಠಕಲ್ ಪಟ್ಟಣದಲ್ಲಿ ಕಳೆದ 1 ತಿಂಗಳಿಂದ ಮಹಾರಾಷ್ಟ್ರದಿಂದ 25 ಜನರ ತಂಡವೊಂದು ಬಂದು ಮಕ್ಕಳನ್ನು ಅಪಹರಣ ಮಾಡಿಕೊಂಡು ಹೋಗುತ್ತಿದ್ದಾರೆ. ಇಷ್ಟೇ ಅಲ್ಲದೇ ಮಕ್ಕಳ ಕಿಡ್ನಿ ತೆಗೆದು ಮಾರಾಟ ಮಾಡುವ ಜಾಲವೊಂದು ಇಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎನ್ನುವ ಸುದ್ದಿ ಹಬ್ಬಿತ್ತು.
ಆಂಜನೇಯ ದೇವಸ್ಥಾನದ ಬಳಿ ಏಳು ವರ್ಷದ ಬಾಲಕನನ್ನು (ಚಿತ್ರದಲ್ಲಿರುವ) ಇಬ್ಬರು ಮಹಿಳೆಯರು ಅಪಹರಿಸಲು ವಿಫಲಯತ್ನ ನಡೆಸಿದ್ದರು. ಕಂದುರಗೇರಿ ಏರಿಯಾದ ಬಾಲಕನನ್ನು ಹಿಡಿದು ಗೋಣಿಚೀಲದಲ್ಲಿ ಹಾಕುತ್ತಿರುವಾಗ ವೃದ್ಧೆಯೊಬ್ಬಳು ನೋಡಿ ಚೀರಿದ್ದಾಳೆ. ಆಗ ಸ್ಥಳೀಯರು ಜಮಾಯಿಸಿ ಇವರಿಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.
ಇಬ್ಬರನ್ನು ಸಾರ್ವಜನಿಕರು ಕಂಬಕ್ಕೆ ಕಟ್ಟಿ ಗೂಸಾ ಕೊಟ್ಟು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸರು ನ್ಯಾಯ ಕೇಳಲು ಹೋದವರನ್ನೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ನಿಜವಾಗಿ ಮಕ್ಕಳ ಅಪಹರಣವಾಗುತ್ತಿರುವುದು ಎಷ್ಟರ ಮಟ್ಟಿಗೆ ಸತ್ಯ ಎಷ್ಟರ ಮಟ್ಟಿಗೆ ಸುಳ್ಳು ಎನ್ನುವುದು ಪೊಲೀಸ್ ತನಿಖೆಯಿಂದ ಬರುವ ದಿನಗಳಲ್ಲಿ ಗೊತ್ತಾಗಬೇಕಾಗಿದೆ.












Click it and Unblock the Notifications