ಲಖ್ನೊ ಯುವತಿ ದೆಹಲಿಯಲ್ಲಿ ಗ್ಯಾಂಗ್ ರೇಪ್ ಆಗಿದ್ದು ಹೇಗೆ?

ಯುವತಿಯನ್ನು ತನ್ನ ಫ್ಲಾಟಿಗೆ ಆಹ್ವಾನಿಸಿದ ಸಹೋದ್ಯೋಗಿ, ತಂಪು ಪಾನೀಯ ಕೊಟ್ಟ. ಆದನ್ನು ಕುಡಿಯುತ್ತಿದ್ದಂತೆ ಯುವತಿಗೆ ಪ್ರಜ್ಞೆ ತಪ್ಪಿತು. ಜ್ಞಾನ ಬಂದ ಮೇಲೆ ಯುವತಿಯ ಎದುರಿಗೆ ನಾಲ್ವರು ಪುರುಷರು ಕಾಣಿಸಿಕೊಂಡರು. ಆಗ ತಿಳಿಯಿತು ಯುವತಿಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದು.
ಮುಂದ!? ಅವರೆಲ್ಲ ಯುವತಿಯ ನಗ್ನ ಚಿತ್ರಗಳನ್ನು ತೆಗೆದರು. ಜತೆಗೆ ಎಂಎಂಎಸ್ ವಿಡಿಯೋ ಸಹ ಮಾಡಿದ್ದಾರೆ. ಆಗ ಯುವತಿ ಪ್ರತಿಭಟಿಸಿದಾಗ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸಹೋದ್ಯೋಗಿ ಆವಾಜ್ ಹಾಕಿದ್ದಾನೆ.
ಸ್ವಲ್ಪ ದಿನಗಳ ನಂತರ ಸಾವರಿಸಿಕೊಂಡು, ಪೊಲೀಸರಿಗೆ ವಿಷಯ ತಿಳಿಸುವುದಾಗಿ ಹೇಳಿದಾಗ ಮದುವೆಯಾಗುವುದಾಗಿ ಯುವತಿಯನ್ನು ಸಹೋದ್ಯೋಗಿ ಸಮಾಧಾನ ಪಡಿಸಿದ್ದಾನೆ. ಇದಕ್ಕೆ ಯುವತಿಯೂ ಒಪ್ಪಿದ್ದಳು. ಆದರೆ ಸ್ನೇಹಿತರ ಜತೆಗೂಡಿ ಮುಂದೆ ವಂಚಿಸಿದ ಎಂದು ಯುವತಿ ಪೊಲೀಸರೆದುರು ಅಲವತ್ತಕೊಂಡಿದ್ದಾಳೆ.












Click it and Unblock the Notifications