ಭಗತ್ ಸಿಂಗ್ ಕ್ರಾಂತಿ ಸೇನಾ ಗೊತ್ತಾ ನಿಮ್ಗೆ?

Bhagat Singh Kranti Sena history
ನವದೆಹಲಿ, ಅ.12: ಅಣ್ಣಾ ಬೆಂಬಲಿಗ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಭಗತ್ ಸಿಂಗ್ ಕ್ರಾಂತಿ ಸೇನಾ ಹುಟ್ಟಿದ್ದು ಎಲ್ಲಿ, ಬೆಳೆಯುತ್ತಿರುವುದು ಎಲ್ಲಿ? ಪ್ರಶಾಂತ್ ಬಗ್ಗೆ ಯಾಕೆ ಅಷ್ಟು ಕಿಚ್ಚು ಬೆಳೆಯಿತು ನೋಡೋಣ...

C-76 ಮಂಗಳ್ ಬಜಾರ್ ವಿಷ್ಣು ಗಾರ್ಡನ್ ನವದೆಹಲಿ 110018 ನಲ್ಲಿ ಕಚೇರಿ ಹೊಂದಿರುವ ಭಗತ್ ಸಿಂಗ್ ಕ್ರಾಂತಿ ಸೇನಾ ದಲ್ಲಿ ಕ್ರಾಂತಿ ಕಾರಿ ಮನೋಭಾವನೆ ಉಳ್ಳ ದೇಶಪ್ರೇಮಿಗಳಿದ್ದಾರೆ. ದೇಶಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಆದೆ, ಇದು ಮೊದಲ ಕೃತ್ಯವಲ್ಲ ಕಾಶ್ಮೀರ ವಿರೋಧಿ ಹೇಳಿಕೆ ನೀಡಿದವರೆಲ್ಲರಿಗೂ ಈ ರೀತಿ ತಪರಾಕಿ ಸಿಕ್ಕಿದೆ.[ಪ್ರಶಾಂತ್ ಮೇಲೆ ಹಲ್ಲೆ ವಿಡಿಯೋ]

ದೇಶ ವಿರೋಧಿ ಹೇಳಿಕೆ ನೀಡುವವರು, ಭ್ರಷ್ಟರು, ಕುಹಕಿಗಳ ವಿರುದ್ಧ ಕ್ರಮ ಕೈಗೊಳ್ಳುವ ಈ ಪಡೆ ದೇಶಕ್ಕಾಗಿ ಸಾಯಲು ಸಿದ್ಧ ಆದರೆ, ಮೊಘಲರು ಆಳಿದಂತೆ ನಮ್ಮನ್ನು ತುಳಿಯಲು ಯತ್ನಿಸಿದರೆ ಸಿಡಿದೇಳುತ್ತೇವೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ದೇಶದ ಬಗ್ಗೆ ಕ್ರಾಂತಿಕಾರಿ ಮನೋಭಾವನೆ ಬೆಳೆಸಲು ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಬ್ಲಾಗ್ ಗಳನ್ನು ಭಗತ್ ಸಿಂಗ್ ಸೇನಾ ಚೆನ್ನಾಗಿ ಬಳಸಿಕೊಂಡಿದೆ.

ದೇಶಭಕ್ತರೆ ಇಲ್ಲಿ ನೋಡಿ : ವಿಶೇಷ ಎಂದರೆ ಫೇಸ್ ಬುಕ್ ಖಾತೆಯಲ್ಲಿ ಇರುವ ಸಂಘಟನೆಯ ಬ್ಲಾಗ್ ಗೆ ಹೋಗಿ ನೋಡಿದರೆ ಅಲ್ಲಿ ತಿಹಾರ್ ಜೈಲಿನ ಮುಂದೆ ಪ್ರತಿಭಟನೆ ಮಾಡಿದ ಚಿತ್ರಗಳಿವೆ. communal bill ವಿರೋಧಿ, ಕಾಶ್ಮೀರ ವಿರೋಧಿ ಹೇಳಿಕೆ, ಅರುಂಧತಿ ರಾಯ್ ವಿರುದ್ಧ ಪ್ರತಿಭಟನೆ, ದೇಶ ಇಬ್ಭಾಗ ಮಾಡುವಂತೆ ಹೇಳಿದವರನ್ನು ಖಂಡಿಸಿದ ಲೇಖನಗಳು, ಚಿತ್ರಗಳು ಸೇರಿದೆ.

ಪ್ರಶಾಂತ್ ಅಟ್ಯಾಕ್ ನಂತರ ಫೇಸ್ ಬುಕ್ ಖಾತೆಯಲ್ಲಿ ಅನೇಕರು ಘಟನೆಯನ್ನು ಖಂಡಿಸಿದ್ದಾರೆ.

kalmadi, chidambaram, maran or diggi ಮೇಲೆ ದಾಳಿ ನಡೆಸಿ, ಪ್ರಶಾಂತ್ ಮೇಲೆ ಯಾಕೆ? ಕಾಂಗ್ರೆಸ್ ದುಡ್ಡು ಕೊಡಿದ್ಯಾ ಎಂದು ಅನೇಕರು ಕೇಳಿದ್ದಾರೆ. ಭಗತ್ ಸಿಂಗ್ ಹೆಸರು ಕೆಡಿಸಬೇಡಿ, ಹೇಡಿಗಳೇ ಎಂದು ಅನೇಕರು ವಾಲ್ ಮೇಲೆ ಬರೆದಿದ್ದಾರೆ. ಕೆಲವರು ವೆರಿ ಗುಡ್ ಶಾಟ್ ಮುಂದುವರೆಸಿ ಎಂದು ಬೆಂಬಲಿಸಿದ್ದಾರೆ.

ಭಗತ್ ಸಿಂಗ್ ಸೇನೆ ಕೆರಳುವಂತೆ ಮಾಡಿದ ಫೇಸ್ ಬುಕ್ ನ ಇನ್ನೊಂದು ಚರ್ಚೆ ಬಗ್ಗೆ ಮುಂದೆ ನೋಡೋಣ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+