ಕೆಜಿಎಫ್ ಬೆಸ್ಕಾಂ ಇಂಜಿನಿಯರ್ ರೇಪ್ ಯತ್ನ

ಸೋಮವಾರ ಸಂಜೆ ಇಂಜಿನಿಯರ್ ಸೋನಿಯಾ ತನ್ನ ಮಗನೊಂದಿಗೆ ಆಟೋದಲ್ಲಿ ಅಶೋಕ್ ನಗರದ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಅದೇ ಆಟೋ ಹತ್ತಿದ ಆರೋಪಿಗಳಾದ ರಾಜ್‌ಕುಮಾರ್(37), ಮುರಳಿ(35) ಹಾಗೂ ಮತ್ತೊಬ್ಬ ವ್ಯಕ್ತಿ ಸೋನಿಯಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಮಾನಭಂಗ ಮಾಡುವ ಉದ್ದೇಶದಿಂದ ಕೈಗಳಿಂದ ಹಲ್ಲೆ ನಡೆಸಿ ಆಟೋ ಚಾಲಕನನ್ನು ಬೆದರಿಸಿದ್ದಾರೆ. ಅಟೋವನ್ನು ಸ್ವಾಮಿನಾಥಪುರಂ ಪ್ರದೇಶಕ್ಕೆ ಓಡಿಸುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ ಆಟೋ ಚಾಲಕ ನಿರಾಕರಿಸಿದಾಗ ಜಗಳ ಆರಂಭವಾಗಿದೆ.
ಚಾಲಕನೊಂದಿಗೆ ಆರೋಪಿಗಳು ಕಿತ್ತಾಡುವಾಗ ಸೋನಿಯಾ ಉಪಾಯದಿಂದ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪತಿ ಸುರೇಶ್ ಮತ್ತು ರಾಜ್‌ಕುಮಾರ್ ಹಾಗೂ ಮುರಳಿ ಮಧ್ಯೆ ಜಗಳವಾಗಿದೆ.
ಈ ಘಟನೆ ಕುರಿತು ಸೋನಿಯಾ ರಾಬರ್ಟ್‌ಸನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಬರ್ಟ್‌ಸನ್ ಪೇಟೆ ಪಿಎಸ್ಸೈ ಎಲ್.ಆಂಜಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗಳಾದ ರಾಜ್‌ಕುಮಾರ್ ಹಾಗೂ ಮುರಳಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.












Click it and Unblock the Notifications