ದಲಿತರು ಕಾಲಿಟ್ಟ ಕಡೆ ಹೊನ್ನು ಸುರಿತ್ತದೆ: ಈಶ್ವರಪ್ಪ

ದಲಿತರು ದೇಗುಲ ಪ್ರವೇಶ ಮಾಡಿದರೆ ಪಾಪ ಬರುವುದಿಲ್ಲ, ಮೈಲಿಗೆ ಆಗುವುದಿಲ್ಲ, ದಲಿತರು ಕಾಲಿಟ್ಟ ಕಡೆ ಹೊನ್ನು ಸುರಿಯುತ್ತದೆ. ನೆಲ ಜಲ ಶುದ್ಧವಾಗಿರುತ್ತದೆ. ಪುಣ್ಯ ಬರುತ್ತದೆ. ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಎಂದು ಜಾತಿ ರಾಜಕಾರಣ, ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಿಲ್ಲ. ಮುಸ್ಲಿಮರು ಕಾಂಗ್ರೆಸ್ ನ ಆಸ್ತಿ ಎಂದು ಆ ಪಕ್ಷ ಅಂದುಕೊಂಡಿದೆ. ಮತದಾರರ ಓಲೈಕೆಗೆ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯುವುದು ಆ ಪಕ್ಷದ ಸಿದ್ಧಾಂತ ನಮಗೆ ಅಂಥ ದುರ್ಗತಿ ಬಂದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ದೊಡ್ಡ ದುರಂತ : ಅಂಬೇಡ್ಕರ್ ಅವರನ್ನು ದಲಿತರಿಗೆ, ಬಸವಣ್ಣ ಅವರನ್ನು ಲಿಂಗಾಯಿತರಿಗೆ, ಕನಕದಾಸರನ್ನು ಕುರುಬರಿಗೆ, ಶಂಕರಾಚಾರ್ಯರನ್ನು ಬ್ರಾಹ್ಮಣರಿಗೆ ಸೀಮಿತ ಮಾಡುತ್ತಿರುವುದು ದೊಡ್ಡ ದುರಂತ ಎಂದು ಈಶ್ವರಪ್ಪ ಅವರು ಆದಿ ಕವಿ, ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಸಮಾರಂಭದಲ್ಲಿ ಹೇಳಿದರು.












Click it and Unblock the Notifications