ಸ್ಲೋ ಡ್ರೈವಿಂಗ್ ಮಹಿಳೆಗೆ ರಿಕ್ಷಾ ಚಾಲಕ ಆವಾಜ್

ಸಂಗೀತಾ ಎಂಬುವರು ಮಾರುತಿ ಕಾರನ್ನು ಅತ್ಯಂತ ನಿಧಾನವಾಗಿ ಚಲಿಸುತ್ತಿದ್ದರು. ಜೊತೆಗೆ ಹಿಂದೆ ಬರುತ್ತಿರುವ ವಾಹನಗಳಿಗೂ ಸೈಡ್ ಕೊಡುತ್ತಿರಲಿಲ್ಲ.
ಇದೇ ಸಂದರ್ಭದಲ್ಲಿ ರಿಕ್ಷಾ ಚಾಲಕ ಮೊಯ್ದಿನ್ ಹಲವು ಬಾರಿ ಹಾರನ್ ಮಾಡಿ ಸೈಡ್ ಪಡೆಯಲು ಯತ್ನಿಸಿ, ವಿಫಲನಾಗಿ ರೋಸಿ ಹೋಗಿದ್ದಾನೆ. ನಂತರ ತನ್ನ ರಿಕ್ಷಾ ಅಡ್ಡ ನಿಲ್ಲಿಸಿ ತಡೆದು ಕಾರಿನಲ್ಲಿದ್ದ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾನೆ.
ಪುತ್ತೂರು ಪೇಟೆಯ ಹೊರವಲಯದ ಸಾಲ್ಮರ ಬಳಿ ರಿಕ್ಷಾ ಚಾಲಕನ ಬೈಗುಳ ತಿಂದ ಮೇಲೆ ವೇಗವಾಗಿ ಕಾರು ಓಡಿಸಿಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮೊಯ್ದಿನ್‌ನನ್ನು ವಶಕ್ಕೆ ತೆಗೆದುಕೊಂಡು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.












Click it and Unblock the Notifications