ಕೆಂಗೇರಿ ಕಾಫಿ ಡೇನಲ್ಲಿ ಕಿರಿಕ್ ಮಾಡಿ ದರೋಡೆ

ಕೆಂಗೇರಿ ಉಪನಗರದ 80 ಅಡಿ ರಸ್ತೆಯಲ್ಲಿರುವ ಕಾಫಿಡೇಗೆ ರಾತ್ರಿ 11.15 ರ ಸುಮಾರಿಗೆ ಐವರು ಬಂದಿದ್ದಾರೆ. 370 ರು. ಬಿಲ್ ಕೊಟ್ಟ ಮಾಣಿ ಜೊತೆ ಜಗಳಕ್ಕಿಳಿದ್ದಾರೆ.
ಅಷ್ಟರಲ್ಲಿ ಐವರಲ್ಲಿ ಒಬ್ಬ ಶೌಚಾಲಯಕ್ಕೆ ಹೋಗಿ ನೀರು ಸರಿ ಬರುತ್ತಿಲ್ಲ ಎಂದು ಗಲಾಟೆ ಎಬ್ಬಿಸಿದ್ದಾನೆ. ಅಲ್ಲಿಗೆ ಬಂದ ಸಿಬ್ಬಂದಿಯನ್ನು ಶೌಚಾಲಯದ ಒಳಗೆ ಕೂಡಿ ಹಾಕಲಾಗಿದೆ.
ನಂತರ ಕ್ಯಾಷಿಯರ್ ಅವಿನಾಶ್(23) ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, 10 ಸಾವಿರ ರೂ ನಗದು, 13 ಗ್ರಾಂ ಚಿನ್ನದ ಸರ, 3 ಮೊಬೈಲ್ ಫೋನ್ ದೋಚಿದ್ದಾರೆ. ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications