ವಿಷ ಕುಡಿದು ಪೊಲೀಸರ ಪೇಚಿಗೆ ಸಿಕ್ಕಿಸಿದ ಕಳ್ಳ

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬಂಡಿಹಟ್ಟಿ ನಿವಾಸಿ ಶಿವರಾಜ್ (30). ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರುಗೋಡು ಪೊಲೀಸರು ಶುಕ್ರವಾರ ರಾತ್ರಿಯೇ ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಠಾಣೆಯ ಒಂದು ಮೂಲೆಯಲ್ಲಿದ್ದ ವಿಷದ ಬಾಟಲಿಗೆ ನೀರು ಸೇರಿಸಿ ಕುಡಿದಿದ್ದಾನೆ.
ಬೇರೊಂದು ವಿಷಸೇವನೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ವಿಷದ ಬಾಟಲಿಗೆ ನೀರನ್ನು ಸೇರಿಸಿ ಆರೋಪಿ ಕುಡಿದು ವಿಲವಿಲನೆ ಒದ್ದಾಡುವಾಗ ಪೊಲೀಸರು ಎಚ್ಚೆತ್ತು ಕೂಡಲೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆತಂದಿದ್ದಾರೆ. ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವಿಮ್ಸ್ ವೈದ್ಯರು ತಿಳಿಸಿದ್ದಾರೆ.
ಗ್ರಾಮೀಣ ಡಿವೈಎಸ್ಪಿ, ಕುರುಗೋಡು ಸಿಪಿಐ ಸೇರಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಕುರುಗೋಡಲ್ಲೇ ಮೊಕ್ಕಾಂ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕುರುಗೋಡು ಪಟ್ಟಣದಲ್ಲಿ ಕೆಎಸ್ಸಾರ್ಪಿ ತುಕುಡಿಯನ್ನು ಹಾಕಲಾಗಿದೆ.












Click it and Unblock the Notifications