20 ಲಕ್ಷ ಬೇಡಿಕೆ, ರೇಣುಕಾಚಾರ್ಯಗೆ ಬೆದರಿಕೆ ಪತ್ರ

Renukacharya gets threatening letter
ಬೆಂಗಳೂರು, ಅ. 8 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮುಖವಾಣಿಯಾಗಿರುವ ಹೊನ್ನಾಳಿ ಶಾಸಕ, ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಅನಾಮಿಕ ಪತ್ರವೊಂದು ಬಂದಿದ್ದು, 20 ಲಕ್ಷ ರು. ನೀಡದಿದ್ದರೆ ಮನೆ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಪತ್ರ ಶಿವಮೊಗ್ಗ ಜಿಲ್ಲೆಯ ಸೊರಬದಿಂದ ಬಂದಿದ್ದು, 20 ಲಕ್ಷ ರು. ನೀಡದಿದ್ದರೆ ಹೊನ್ನಾಳಿ ಮತ್ತು ಬೆಂಗಳೂರಿನಲ್ಲಿರುವ ಮನೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಹೊನ್ನಾಳಿ ಪಿಎಸ್ಐಗೆ ದೂರು ನೀಡಲಾಗಿದೆ. 20 ಲಕ್ಷ ರು. ಬೇಡಿಕೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಭದ್ರಕಾಳಿ ದೇವಸ್ಥಾನದಲ್ಲಿ ಕಪ್ಪು ಬ್ಯಾಗಿನಲ್ಲಿ ಹಣವನ್ನು ಇಡಬೇಕೆಂದು ಪತ್ರದಲ್ಲಿ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಪ್ರವಾಸದಲ್ಲಿರುವ ರೇಣುಕಾಚಾರ್ಯ ಅವರು, ನನಗೆ ಯಾರ ಹೆದರಿಕೆಯೂ ಇಲ್ಲ. ಯಾರೋ ಕಿಡಿಗೇಡಿಗಳು ಇದನ್ನು ಮಾಡಿರಬಹುದು. ಪತ್ರವನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕೊಪ್ಪಳ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದನಂತರ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ರೇಣುಕಾಚಾರ್ಯ ಅವರು 40 ಸಾವಿರ ರು. ಬೆಲೆಬಾಳುವ ಐಫೋನ್ ಕಳೆದುಕೊಂಡಿದ್ದರು. ಅದರಲ್ಲಿ ಅನೇಕ ರಹಸ್ಯ ಮಾಹಿತಿಗಳು ಇರುವುದಾಗಿಯೂ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+