ರಾಷ್ಟಪತಿಯನ್ನು ಟ್ವಿಟ್ಟರಿನಲ್ಲಿ ಟೀಕಿಸಿದ ವರುಣ್ ಗಾಂಧಿ

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೂತನ ಉದ್ದದ ಕಾರು ಕಾಮಿಕ್ ಸೂಪರ್ ಹೀರೋ ಬ್ಯಾಟ್ ಮೆನ್ ಗೆ ಸೂಕ್ತವಾಗಿದೆ ಎಂದು ಕೂಡ ವರುಣ್ ಗಾಂಧಿ ಹೇಳಿದ್ದಾರೆ.
"ರಾಷ್ಟ್ರಪತಿ ಕಾರಿಗೆ 6 ಕೋಟಿ ರು. ವೆಚ್ಚ ಮಾಡಿರುವುದು ಹಾಸ್ಯಾಸ್ಪದ. ದೇಶದ ಬಡವರ ಆದಾಯ 32 ರುಪಾಯಿ ನಿಗದಿ ಪಡಿಸಿದ ಸಂದರ್ಭದಲ್ಲಿ ಇಂತಹ ಕಾರು ಖರೀದಿಸಿರುವುದರಲ್ಲಿ ಅರ್ಥ ಇಲ್ಲವೆಂದು" ಬಿಜಿಪಿ ರಾಷ್ಟ್ರೀಯ ಕಾರ್ಯದರ್ಶಿ ವರುಣ್ ಗಾಂಧಿ ಟ್ವಿಟ್ಟರಿನಲ್ಲಿ ಟೀಕಿಸಿದ್ದಾರೆ.
"ಈ ಕಾರು ಫ್ಲಾಟ್ ಟೈರ್ ನಲ್ಲಿ ಚಲಿಸುತ್ತದೆ, ಇದಕ್ಕೆ ಸ್ವಯಂ ಸೀಲಿಂಗ್ ಮಾಡುವ ಇಂಧನ ಟ್ಯಾಂಕ್ ಇದೆ. ಈ ಕಾರು ಬಾಂಬ್ ಸ್ಪೋಟದ ಸಂದರ್ಭದಲ್ಲಿ ರಕ್ಷಿಸುತ್ತದೆ. ಈ ಕಾರು ಪ್ರತಿಭಾ ಪಾಟೀಲ್ ಗಾ ಅಥವಾ ಬ್ಯಾಟ್ ಮೆನ್ ಗೊ" ಎಂದು ಅವರು ಟ್ವಿಟ್ಟಿಸಿದ್ದಾರೆ.
ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೆ ಮರ್ಸಿಡಿಸ್ ಬೆಂಝ್ ಎಸ್600ಎಲ್ ಪಾಲ್ ಮ್ಯಾನ್ ಕಾರು ನೀಡಲಾಗಿದೆ ಎಂದು ವರದಿಗಳು ಹೇಳಿವೆ. ಈ ಕಾರು ಮಿಲಿಟರಿ ದರ್ಜೆಯ ವಿಶೇಷ ಸುರಕ್ಷತಾ ಫೀಚರುಗಳನ್ನು ಹೊಂದಿದೆ. ಅಂದರೆ ಸಣ್ಣಮಟ್ಟದ ಸ್ಪೋಟ, ಗ್ರೇನೆಡ್ ದಾಳಿಗಳಿಂದ ಪಾರಾಗುವಂತಹ ಸೇಫ್ಟಿ ಫೀಚರ್ಸ್ ಇದರಲ್ಲಿದೆ.
ರಾಷ್ಟಪತಿಯ ಹೊಸ ಕಾರಿನ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೆ ದುಬಾರಿ ಸೇಫ್ಟಿ ಕಾರು!












Click it and Unblock the Notifications