ರೆಡ್ಡಿಗಿಂತ ಕಾಂಗ್ರೆಸ್ಸಿಗರ ಅಕ್ರಮ ಅಧಿಕ: ಕುಮಾರ್

ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ವಿನಾ ಕಾರಣ ನನ್ನನ್ನು ಪ್ರಚೋದಿಸುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಒಲಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಗಣಿ ಅಕ್ರಮಗಳಲ್ಲಿ ಭಾಗಿಅಯಗಿರುವ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಬಹಿರಂಗ ಪಡಿಸಿದ ಮೇಲೆ ಸಿದ್ದರಾಮಯ್ಯ ಬಾಯಿ ಬಂದ್ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಭ್ರಷ್ಟರ ವಿರುದ್ಧ ಹೋರಾಟ ನಿಲ್ಲದು: ಬಿಜೆಪಿ ಸರ್ಕಾರದ ಶೇ.40ರಷ್ಟು ಹಗರಣಗಳು ಬೆಳಕಿಗೆ ಬಂದಿದೆ. ಇನ್ನೂ ಶೇ.60ರಷ್ಟು ಹಗರಣಗಳು ಬಯಲಿಗೆಳೆಯಬೇಕಿದೆ.
ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳಿಗೆ ಮಾಜಿ ಸಿಎಂ ಯಡಿಯೂರಪ್ಪ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಬಿಜೆಪಿ ಸರ್ಕಾರದ ಮತ್ತಷ್ಟು ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದ ಕುಮಾರಸ್ವಾಮಿ ಗುಡುಗಿದ್ದಾರೆ.












Click it and Unblock the Notifications