ಬಳ್ಳಾರಿಯಲ್ಲಿ ಸಿಬಿಐ ದಾಳಿ ನಡೆದಿಲ್ಲ : ಜಿಂದಾಲ್ ಸ್ಟೀಲ್ಸ್ !

ಆದರೆ, ಸಿಬಿಐ ತಂಡ ವಿಜಯನಗರ ಘಟಕಕ್ಕೆ ಭೇಟಿ ಕೊಟ್ಟು ಕಬ್ಬಿಣ ಅದಿರು ಸಂಬಂಧಿಸಿದ ಕೆಲ ಮಾಹಿತಿಗಳನ್ನು ಕೇಳಿ ಪಡೆದುಕೊಂಡು ಹೋದರು. ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ ಎಂದು ಜಿಂದಾಲ್ ಸ್ಟೀಲ್ಸ್ ಸ್ಪಷ್ಟಪಡಿಸಿದೆ.
ರೆಡ್ಡಿಗಳಿಂದ ಅದಿರು ಪಡೆದಿದ್ದು ನಿಜ, ಆದ್ರೆ: ಉಕ್ಕು ಕಾರ್ಖಾನೆಗೆ ಅಗತ್ಯವಾದ ಕಬ್ಬಿಣದ ಅದಿರನ್ನು ನಾನಾ ಮೂಲಗಳಿಂದ ಸಂಗ್ರಹಿಸಲಾಗುತ್ತದೆ. ಅದರೆ ಎಲ್ಲಕ್ಕೂ ಅಗತ್ಯ ಲೆಕ್ಕ ಇಡಲಾಗಿದೆ. ಪೂರಕ ದಾಖಲೆಗಳಿವೆ. ರೆಡ್ಡಿಗಳ ಕಂಪನಿಯಿಂದ ಕೂಡಾ ಇದೇ ರೀತಿ ಅದಿರನ್ನು ಪಡೆಯಲಾಗಿದೆ ಅದಕ್ಕೆ ತಕ್ಕ ಮೌಲ್ಯವನ್ನು ನೀಡಲಾಗಿದೆ.
ಜೆಎಸ್ ಡಬ್ಲ್ಯೂ ಸ್ಟೀಲ್ಸ್ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಕಂಪನಿ ಬಗ್ಗೆ ಉಲ್ಲೇಖಿಸಲಾಗಿರುವ ಮಾಹಿತಿ ಅಷ್ಟು ಸುಳ್ಳು ಎಂದು ಜಿಂದಾಲ್ ಸ್ಟೀಲ್ಸ್ ಹೇಳಿಕೊಂಡಿದೆ.
ಆದರೆ, ವಿಶ್ವದಲ್ಲೇ ಅತಿ ಕಡಿಮೆ ಮೌಲ್ಯದಲ್ಲಿ ಉಕ್ಕು ಉತ್ಪಾದಿಸುವ ಜಿಂದಾಲ್ ಗ್ರೂಪ್ ನ ಷೇರು ಖರೀದಿ, ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯುವಂತೆ ಹೂಡಿಕೆದಾರರಿಗೆ ಆರ್ಥಿಕ ತಜ್ಞರು ಸೂಚಿಸಿರುವುದು ಕಂಪನಿಗೆ ಕೊಂಚ ಹಿನ್ನೆಡೆಯಾಗಿದೆ.












Click it and Unblock the Notifications