ಆಟೋಗಳಿಗೆ ಪ್ರತ್ಯೇಕ RTO : ಅಶೋಕ್ ಘೋಷಣೆ

RTO for Auto rickshaw in Bangalore
ಬೆಂಗಳೂರು, ಅ.3: ಆಟೋರಿಕ್ಷಾಗಳಿಗೆ ಪರವಾನಗೆ ನೀಡಲು, ಆಟೋ ಚಾಲಕರಿಗೆ ಲೈಸನ್ಸ್ ನೀಡಲು ಪ್ರತ್ಯೇಕವಾದ ವಿಶೇಷ ಸಾರಿಗೆ ಕಚೇರಿ(RTO) ಯನ್ನು ಶಾಂತಿನಗರದಲ್ಲಿ ಆರಂಭಿಸಲಾಗಿದೆ.

ಆಟೋ ಪರವಾನಗಿ ಪಡೆಯಲು ಮಧ್ಯವರ್ತಿಗಳು 25 ಸಾವಿರ ರೂ.ವರೆಗೆ ಲಂಚ ಪಡೆಯುತ್ತಿದ್ದಾರೆ. ಇದಕ್ಕೆ ಕೆಲ ಸಾರಿಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಿಶೇಷ ಸಾರಿಗೆ ಕಚೇರಿ ಆರಂಭಿಸಲಾಗಿದೆ. ಇಲ್ಲಿ ಕೇವಲ 750 ರೂ. ನೀಡಿ ಆಟೋ ಪರವಾನಗಿ ಪಡೆಯಬಹುದಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.

ಮೆಟ್ರೋ vs ಆಟೋರಿಕ್ಷಾ: ನಮ್ಮ ಮೆಟ್ರೋ ಆರಂಭದಿಂದ ಆಟೋರಿಕ್ಷಾಗಳಿಗೆ ಯಾವುದೇ ತೊಂದರೆ ಇಲ್ಲ. ಬೆಂಗಳೂರು 200 ಚದರ ಕಿಲೋ ಮೀಟರ್ ನಿಂದ 800 ಚ.ಕೀವರೆಗೂ ಬೆಳೆದಿದೆ. ಬಹುವಿಧ ಸಾರಿಗೆ ಕಲ್ಪನೆಗೆ ಬೆಂಗಳೂರಿಗರು ಒಗ್ಗಿಕೊಳ್ಳಬೇಕು ಅಷ್ಟೆ.

ಸಾರಿಗೆ ಇಲಾಖೆ ನೋಂದಣಿ ಶುಲ್ಕವಾಗಿ 1400 ಕೋಟಿ ರೂ. ಆದಾಯ ಬಂದಿದೆ. ಹೆಚ್ಚು ದಂಡವನ್ನೂ ವಸೂಲಿ ಮಾಡಲಾಗಿದೆ. ಸಾರಿಗೆ ಇಲಾಖೆ ಇಷ್ಟರಲ್ಲೇ ಸಾರಿಗೆ ಇಲಾಖೆ ಸಂಪೂರ್ಣ ಗಣಕೀಕರಣಗೊಳ್ಳಲಿದ್ದು, ಕಾಗದ ರಹಿತ ಇಲಾಖೆಯಾಗಿ ಮಾರ್ಪಾಡಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+