ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಹಗರಣದಲ್ಲಿ ಮಾಜಿ ಲೋಕಾಯುಕ್ತ ವೆಂಕಟಾಚಲ

By Mahesh
|
Google Oneindia Kannada News

Justice N Venkatachala in trouble
ಬೆಂಗಳೂರು, ಅ.3: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಗೆ ತಕ್ಕಂತೆ ಮಾಜಿ ಲೋಕಾಯುಕ್ತ ಜಸ್ಟೀಸ್ ಎನ್ ವೆಂಕಟಾಚಲ ಅವರು ನಡೆದುಕೊಂಡಿದ್ದಾರೆ. ಭೂ ಪರಿವರ್ತನೆ ಕಾನೂನು ಉಲ್ಲಂಘನೆಯಲ್ಲಿ ವೆಂಕಟಾಚಲ ಅವರು ಭಾಗಿಯಾಗಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ. ನ ವತಿಯಿಂದ ವೆಂಕಟಾಚಲ ಅವರಿಗೆ 60X90 ವಿಸ್ತೀರ್ಣ ವಸತಿ ನಿವೇಶನ(ನಂ. 1381) ಮಂಜೂರು ಮಾಡಲಾಗಿತ್ತು.

ಸೊಸೈಟಿ ನಿಯಮದಂತೆ ಸೈಟ್ ಮಂಜೂರಾದ ಎರಡು ವರ್ಷದೊಳಗೆ ಅಲ್ಲಿ ಮನೆ ಕಟ್ಟಿಕೊಳ್ಳಬೇಕು. ಹಾಗೂ ವಸತಿ ನಿವೇಶನದಲ್ಲಿ ಬೇರೆ ಯಾವುದೇ ರೀತಿ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ.

ಆದರೆ, ವೆಂಕಟಾಚಲ ಅವರು ವಸತಿ ನಿವೇಶನವನ್ನು ಟೆನ್ನಿಸ್ ಕೋರ್ಟ್ ಆಗಿ ಪರಿವರ್ತಿಸಿ ನಿಯಮ ಉಲ್ಲಂಘಿಸಿದ್ದಾರೆ.

ಈ ಬಗ್ಗೆ ಜುಡಿಷಿಯಲ್ ಲೇಔಟ್ ನ ನಿವಾಸಿಯೊಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಇತರೆ ಲೇಔಟ್ ಗಳಲ್ಲಿ ಪಾಲಿಸಲಾಗುವ ನಿಯಮಗಳು ಜುಡಿಷಿಯಲ್ ಲೇಔಟ್ ಗೂ ಅನ್ವಯವಾಗುತ್ತದೆ.

ಬಿಡಿಎ ಹಾಗೂ ಬಿಬಿಎಂಪಿ ನಿಯಮದ ಪ್ರಕಾರ ನಿವೇಶನವನ್ನು 10 ವರ್ಷಗಳ ತನಕ ಯಾರಿಗೂ ಮಾರಾಟ ಮಾಡುವಂತಿಲ್ಲ. ವಸತಿ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವಂತಿಲ್ಲ ಅಥವಾ ಇತರೆ ಯಾವುದೇ ಉಪಯೋಗಕ್ಕಾಗಿ ಬಳಸುವಂತಿಲ್ಲ.

ಆದರೆ, ಕಾನೂನು ಹೇಳುವ ವೆಂಕಟಾಚಲ ಅವರ ಪ್ರತಿಕ್ರಿಯೆ ಏನು?...

English summary
Former Lokayukta Justice N Venkatachala reportedly involved in serious land violation. Venkatachala has converted the residential site into a tennis court thus violating the Judicial society’s norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X