ವೆಂಕಟಾಚಲರ ಕಾನೂನಿನ ಕಣ್ಣು ಕುರುಡಾಯಿತೇ?

Tennis court
ಬೆಂಗಳೂರು. ಅ.3: ಭೂ ಪರಿವರ್ತನೆ ನಿಯಮ ಉಲ್ಲಂಘಿಸಿರುವ ಬಗ್ಗೆ ಜಸ್ಟೀಸ್ ವೆಂಕಟಾಚಲ ಅವರು ನೀಡಿರುವ ಪ್ರತಿಕ್ರಿಯೆ ಹುಬ್ಬೇರಿಸುತ್ತದೆ.

ಸದಾಶಿವನಗರದ ನಿವಾಸಿ ವೆಂಕಟಾಚಲ ಅವರು ಹೇಳುವ ಪ್ರಕಾರ, ವಸತಿ ನಿವೇಶನವನ್ನು ಟೆನ್ನಿಸ್ ಕೋರ್ಟ್ ಆಗಿ ಪರಿವರ್ತಿಸಿರುವುದು ತಮ್ಮ ಮೊಮ್ಮಗಳ ಅನುಕೂಲಕ್ಕಾಗಿ ಅಂತೆ. ಮೊಮ್ಮಗಳ ಟೆನ್ನಿಸ್ ಪ್ರೇಮಕ್ಕೆ ನಿವೇಶನವನ್ನು ಅಜ್ಜ ವೆಂಕಟಾಚಲ ಧಾರೆ ಎರೆದಿದ್ದಾರೆ.

ಆದರೆ, ನಿಯಮ ಉಲ್ಲಂಘನೆ ಆಗಿರುವುದನ್ನು ಒಪ್ಪಗೊಳ್ಳಲು ತಯಾರಿಲ್ಲ. 'ನನಗೆ ಗೊತ್ತು ನಿಯಮಗಳ ಪ್ರಕಾರ ನಿವೇಶನ ಪಡೆದ ಎರಡು ವರ್ಷದೊಳಗೆ ಮನೆ ಕಟ್ಟಬೇಕು. ಆದರೆ, ನನ್ನ ಬಳಿ ಮನೆ ಕಟ್ಟುವಷ್ಟು ಹಣ ಇಲ್ಲ. ನನ್ನನ್ನು ಏಕೆ ಅಷ್ಟು ಪ್ರಶ್ನಿಸುತ್ತೀರಾ? ನಗರದಲ್ಲಿ ಈ ರೀತಿ ನಿವೇಶನವನ್ನು ಬೇರೆ ಉದ್ದೇಶಕ್ಕೆ ಬಳಸಿದ ಉದಾಹರಣೆಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ವೆಂಕಟಾಚಾಲಂ ಅವರು ಗರಂ ಆಗಿ ಪ್ರತಿ ಸವಾಲು ಹಾಕಿದ್ದಾರೆ.

ಬ್ಯಾಟರಾಯನ ಪುರ(ಬಿಬಿಎಂಪಿ) ವಾರ್ಡ್ ನ (ಟೌನ್ ಪ್ಲ್ಯಾನಿಂಗ್) ಕಿರಿಯ ಸಹಾಯಕ ಅಭಿಯಂತರ ರವೀಂದ್ರ ನಾಥ್ ತಲವಾಡ ಅವರು ಲೋಕಾಯುಕ್ತ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ವೆಂಕಟಾಚಲ ಅವರು ವಸತಿ ನಿವೇಶನವನ್ನು ಟೆನ್ನಿಸ್ ಕೋರ್ಟ್ ಆಗಿ ಪರಿವರ್ತಿಸಲು ಅನುಮತಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟರಿಗೆ ಸಿಂಹಸ್ವಪ್ನಾಗಿದ್ದ ವೆಂಕಟಾಚಲ ಅವರ ಕಾನೂನಿನ ಕಣ್ಣು ವ್ಯಾಮೋಹಕ್ಕೆ ಬಿದ್ದು ಕುರುಡಾಯಿತೇ? ನ್ಯಾಯಮೂರ್ತಿಗಳಿಗೆ ಹೊಸ ನಿಯಮ ಏನಾದರೂ ಇದೆಯೇ? ಗೊತ್ತಿಲ್ಲ. ವಸತಿ ನಿವೇಶನದ ಜಾಗದಲ್ಲಿ ಟೆನ್ನಿಸ್ ಚೆಂಡಿನ ಸದ್ದು ಮಾತ್ರ ನಿಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+