ಚಪ್ಪಲಿ ಸೇವೆ: ಸೋಮಣ್ಣ, ಅಶೋಕಣ್ಣ ಏನಣ್ಣಾ ಇದೆಲ್ಲ?
ಬೆಂಗಳೂರು,
ಅ.02: ಸಚಿವ ಸೋಮಣ್ಣ ಮೇಲೆ ಚಪ್ಪಲಿಯಿಂದ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪಕ್ಷದಲ್ಲಿನ ಹುಳುಕು ಬಯಲಿಗೆ ಬಂದಿದೆ. ಬೆಂಗಳೂರು ನಗರವನ್ನು ಪ್ರತಿನಿಧಿಸುವ ಅತಿರಥ ಮಹಾರಥರೆಂದೇ ಬಿಂಬಿತರಾಗಿರುವ ಸೋಮಣ್ಣ ಹಾಗೂ ಅಶೋಕ್ ನಡುವಣ ಮುಸುಕಿನ ಗುದ್ದಾಟ ಜಗತ್ತಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ. id="toptextpromo">ಹೇಳಿಕೇಳಿ
ಸೋಮಣ್ಣ ಯಡಿಯೂರಪ್ಪ ಬಣದೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡವರು. ಇದೇ ವೇಳೆ, ಅಶೋಕ್ ಅವರು ಯಡಿಯೂರಪ್ಪ ಅವರಿಂದ ದೂರವಾಗಿ ಯಾವುದೋ ಕಾಲವಾಗಿದೆ. id='are-slot-1' class='oiad oi-axt oiadv'> id='top-searched-articles'>ಇಂತಹ
ಸಂದರ್ಭದಲ್ಲಿ ಗೃಹಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಶೋಕ್, ವಿವೇಚನೆ ಕಳೆದುಕೊಂಡು 'ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿರುವ ಆರೋಪಿ ಬಿ.ಎಸ್. ಪ್ರಸಾದ್ (35) ವೀರಶೈವ ಜನಾಂಗಕ್ಕೆ ಸೇರಿದವನೆಂದೂ, ಆತನ ಬಳಿ ಮಾಜಿ ಸಿಎಂ ಯಡಿಯೂರಪ್ಪ ಭಾವಚಿತ್ರ ಇರುವ ವಿಸಿಟಿಂಗ್ ಕಾರ್ಡ್ ಪತ್ತೆಯಾಗಿದೆ ಎಂಬ ಹೇಳಿಕೆ ನೀಡಿ ರಾಡಿ ಎಬ್ಬಿಸಿದ್ದಾರೆ.











Click it and Unblock the Notifications