ಅಶೋಕ ಮಹಾರಾಜರಿಗೆ ಧರ್ಮಸೂಕ್ಷ್ಮ ಅರ್ಥವಾಗಲಿಲ್ವಾ?
ಬೆಂಗಳೂರು,
ಅ.02: ಪೊಲೀಸ್ ಇಲಾಖೆಯ ಅಶೋಕ್ ಮಹಾರಾಜರು ಆಯುಕ್ತ ಮಿರ್ಜಿ ಸಾಹೇಬರನ್ನು ಕರೆಸಿ ಖುದ್ದಾಗಿ ಮಾತಬನಾಡುವ ಬದಲು ಇಂತಹ ಸೂಕ್ಷ್ಮಗಳನ್ನು ಸಾರ್ವಜನಿಕವಾಗಿ ಹೇಳಬಾರದು ಎಂಬ ಧರ್ಮ ಸೂಕ್ಷ್ಮ ಅಶೋಕ್ ಗೆ ಇಲ್ಲವಾಯಿತೇ? ಇಲ್ಲವೇ ಬೇಕಂತಲೇ ರಾಡಿ ಎಬ್ಬಿಸಿದರಾ? id="toptextpromo">ಅಷ್ಟೇ
ಅಲ್ಲದೆ ಸೋಮಣ್ಣರ ಗೋವಿಂದರಾಜನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ನಡೆಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳುವ ಮೂಲಕ ಚಪ್ಪಲಿ ಸೇವೆಗೆ ಬೇರೆಯದೇ ತಿರುವನ್ನೂ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ರಾಷ್ಟ್ರದ ರಾಜಧಾನಿಯಲ್ಲಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸೋಮಣ್ಣ ಅವರ ಜತೆ ಎರಡು ಸುತ್ತಿನ ಮಾತುಕತೆ ನಡೆಸಿ, ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಆದರೆ, ಶನಿವಾರ ಸಂಜೆ ಮಂಡ್ಯ ಪ್ರವಾಸದಿಂದ ವಾಪಸು ಬಂದು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಅಶೋಕ್ ಸೌಜನ್ಯಕ್ಕೂ ಸೋಮಣ್ಣರ ಜತೆ ಮಾತುಕತೆ ನಡೆಸಿ ಸಾಂತ್ವನ ಹೇಳಿಲ್ಲ ಎಂಬುದೇನನ್ನು ಸೂಚಿಸುತ್ತದೋ ಅಶೋಕ್ ಮಹಾರಾಜರೇ ಹೇಳಬೇಕು.











Click it and Unblock the Notifications