ಅಶೋಕ್ ಬಾಯಿಂದ ಚಪ್ಪಲಿ ಸೇವಾಕರ್ತನ ಪ್ರವರ

ಚನ್ನಪಟ್ಟಣ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಎಂಬ ಮಾಹಿತಿ ಇದೆ. ಕಳೆದ ಗೋವಿಂದರಾಜನಗರ ಉಪ ಚುನಾವಣೆಯಲ್ಲಿ ಸೋಮಣ್ಣರ ಪರವಾಗಿ ಪ್ರಚಾರ ಮಾಡಿದ್ದಾಗಿ ಆತ ಹೇಳಿದ್ದಾನೆ.
ಆತ ವಿಧಾನಸೌಧ ಪ್ರವೇಶಕ್ಕೆ ಬಿಜೆಪಿ ಕಚೇರಿಯಿಂದಲೇ ಪಾಸ್ ಪಡೆದಿದ್ದಾನೆ. ಮುಖ್ಯಮಂತ್ರಿ ಕಚೇರಿಗೆ ಬರಬೇಕಾಗಿದೆ ಎಂದು ಗೇಟ್‌ನಲ್ಲಿ ನಮೂದಿಸಿದ್ದಾನೆ. ಆತನ ಬಳಿಯಲ್ಲಿ ಯಾವುದೇ ಆಯುಧವೂ ಇರಲಿಲ್ಲ. ಆತ ಕುಡಿದಿರಲಿಲ್ಲ. ಆತನ ವಿಸಿಟಿಂಗ್ ಕಾರ್ಡಿನ ಹಿಂದೆ ಯಾರಿಗೋ ಶಿಫಾರಸು ಪತ್ರ ಬರೆದುಕೊಟ್ಟಿದ್ದಾನೆ.
ಸೋಮಣ್ಣರನ್ನು ಹಲವು ಬಾರಿ ಭೇಟಿ ಮಾಡಿ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಂತೆ ಮನವಿ ಮಾಡಿರುವುದಾಗಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾನೆ. ಆತನ ವಿರುದ್ಧ ಐಪಿಸಿ 341, 323, 504 ಮತ್ತು 506ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೋಮಣ್ಣ ನನ್ನ ಒಳ್ಳೆಯ ಸ್ನೇಹಿತರು, ಈ ಘಟನೆ ಖಂಡಿಸುತ್ತೇನೆ.












Click it and Unblock the Notifications