ಹೆಂಡತಿ ಮೇಲಿನ ದಬ್ಬಾಳಿಕೆಗೆ ಐಟಿ ಕ್ಷೇತ್ರ ಕಾರಣ?

ಮಂಗಳಗಂಗೋತ್ರಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ 'ಮಹಿಳಾ ಚಳವಳಿಗಳು ಮತ್ತು ಹೋರಾಟಗಳು' ಎಂಬ ವಿಚಾರ ಸಂಕಿರಣದಲ್ಲಿ ಮಹಿಳಾ ದೌರ್ಜನ್ಯ ಕುರಿತು ನಡೆಸಿದ ಅಧ್ಯಯನದ ವಿವರ ತಿಳಿಸಿದವರು ವಿಮೋಚನಾದ ನಿರ್ದೇಶಕಿ ಡೋನಾ ಫರ್ನಾಂಡಿಸ್.
ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದಿಂದಾಗಿ 3 ದಿನಗಳಲ್ಲಿ 1 ಸಾವು ಸಂಭವಿಸುತ್ತಿತ್ತು. ಇಂದು ಎಲ್ಲ ಉಲ್ಟಾಪುಲ್ಟಾ ಆಗಿದ್ದು, 1 ದಿನದಲ್ಲಿ 3 ಸಾವು ಸಂಭವಿಸುತ್ತಿವೆ. ವರದಕ್ಷಿಣೆ ಬೇಡಿಕೆ ಅತಿ ಹೆಚ್ಚು ಸಾವುಗಳಿಗೆ ಕಾರಣವಾಗುತ್ತಿದೆ ಎಂಬು ಡೋನಾ ಅಭಿಪ್ರಾಯಪಟ್ಟರು.
ಹೆಂಡತಿಯ ಮೇಲೆ ಲೈಂಗಿಕ, ಮಾನಸಿಕ, ದೈಹಿಕ ದೌರ್ಜನ್ಯಗಳು ತೀರ ಹೆಚ್ಚುತ್ತಿದ್ದು, ಹೆಚ್ಚಿನ ಪ್ರಕರಣಗಳು ಐಟಿ ಕ್ಷೇತ್ರದಿಂದ ಹೊರಬೀಳುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ದುರದೃಷ್ಟಕರ ಸಂಗತಿಯೆಂದರೆ, ಯುವಕರು ವಿದ್ಯಾವಂತರಾಗಿದ್ದರೂ ಇಂಥ ಘಟನೆಗಳು ಸಂಭವಿಸುತ್ತಿರುವುದು ಅವರು ವಿಷಾದ ವ್ಯಕ್ತಪಡಿಸಿದರು.
ತಮ್ಮ ಗೋಳಿನ ಕಥೆಗಳನ್ನು ಹೇಳಿಕೊಂಡು ಕನಿಷ್ಠ ಇಬ್ಬರು ವಿವಾಹಿತ ಮಹಿಳೆಯರು ವಿಮೋಚನಾವನ್ನು ಸಂಪರ್ಕಿಸುತ್ತಿದ್ದಾರೆ. ಇಂಥ ದೌರ್ಜನ್ಯಗಳನ್ನು ಹೇಗಾದರೂ ಮಾಡಿ ತಡೆಯಬೇಕು. ಮಹಿಳಾ ದೌರ್ಜನ್ಯವನ್ನು ತಡೆಗಟ್ಟಲು ತುರ್ತುಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ನುಡಿದರು.












Click it and Unblock the Notifications