1ಸಾವಿರ ಕೋಟಿ ರೂಪಾಯಿಯ ಅಪಾರ್ಟ್ಮೆಂಟ್
ಬೆಂಗಳೂರು
ಸೆ 30: ಹಳೆ ಮದರಾಸು ರಸ್ತೆಯ ಕೆ ಆರ್ ಪುರಂ ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಅಪಾರ್ಟ್ಮೆಂಟ್ ತಲೆ ಎತ್ತಲಿದೆ. ನಗರದ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಾಲಿಟ್ಟಿರುವ ಪಶ್ಮಿನಾ ಬಿಲ್ಡರ್ಸ್ ಇದನ್ನು ನಿರ್ಮಿಸಲಿದೆ. id="toptextpromo">ಪಶ್ಮಿನಾ
ವಾಟರ್ ಫ್ರಂಟ್ ಅಪಾರ್ಟ್ಮೆಂಟ್ ಹೆಸರಿನಲ್ಲಿ ನಿರ್ಮಾಣವಾಗಲಿರುವ ಈ ಭಾರೀ ವಸತಿಗೃಹ ಹತ್ತು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಈ ಅಪಾರ್ಟ್ಮೆಂಟ್ ಇನ್ನೆರಡು ವರ್ಷಗಳಲ್ಲಿ ನಿರ್ಮಾಣವಾಗಲಿದ್ದು ಫ್ಲಾಟ್ ಒಂದರ ಬೆಲೆ ಕೇವಲ 70 ಲಕ್ಷ !! id='are-slot-1' class='oiad oi-axt oiadv'> id='top-searched-articles'>ಸಂಪೂರ್ಣವಾಗಿ
ವಾಸ್ತು ಪ್ರಕಾರವೇ ಇದು ನಿರ್ಮಾಣವಾಗಲಿದೆ. 1100 ಕ್ಕೂ ಹೆಚ್ಚು ಮನೆಗಳು ಇದರಲ್ಲಿರುತ್ತವೆ ಮತ್ತು ಅಪಾರ್ಟ್ಮೆಂಟ್ ನಲ್ಲಿ ಒಂಬತ್ತು ಗೋಪುರಗಳು ಇರುತ್ತವೆ. ಪ್ರತಿಯೊಂದು ಗೋಪುರ 38 ಮಹಡಿಗಳಷ್ಟು ಎತ್ತರವಿರಲಿದೆ. ಫ್ಲಾಟ್ ಮಾಲೀಕರಿಗೆ ಸ್ವತಂತ್ರ ಜೀವನ ನಡೆಸಲು ಅನುಕೂಲವಾಗುವಂತೆ ಪ್ರತಿ ಫ್ಲಾಟ್ ಗಳ ಮಧ್ಯೆ ಗೋಡೆ ಇರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.











Click it and Unblock the Notifications