ಎಚ್ ಡಿ ಬಾಲಕೃಷ್ಣಗೌಡ ವಿರುದ್ಧ ಎಫ್‌ಐಆರ್

ಈ ಬಗ್ಗೆ ವಿವರಣೆ ನೀಡಿದ ಲೋಕಾಯುಕ್ತ ಸಹಾಯಕ ಮಹಾ ನಿರ್ದೇಶಕ ಜೀವನ್‌ಕುಮಾರ್ ಗಾಂವ್‌ಕರ್, ಗುರುವಾರ ಸಂಜೆ ತಡವಾಗಿ ನ್ಯಾಯಾಲಯದ ಆದೇಶ ದೊರೆಯಿತು, ಹಾಗಾಗಿ ಶುಕ್ರವಾರದಂದು FIR ದಾಖಲಿಸಲಾಗಿದೆ ಎಂದರು.
ಲೋಕಾಯುಕ್ತ ಪೊಲೀಸರ ಪ್ರಕಾರ ಬಾಲಕೃಷ್ಣ ಗೌಡರ ವಿರುದ್ಧ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ದಾಖಲಾಗಿದ್ದು, ದೋಷಾರೋಪಣ ಪಟ್ಟಿ ಸಿದ್ಧವಾಗಿದೆ.
ಬಂಧನ ಸಾಧ್ಯತೆ?: ಕೆಎಎಸ್ ಅಧಿಕಾರಿಯಾಗಿದ್ದಾಗ ಸೇವಾವಧಿಯಲ್ಲಿ ತಮ್ಮ ಆದಾಯ ಮೂಲಗಳನ್ನೂ ಮೀರಿ ಆಸ್ತಿ ಹೊಂದಿದ್ದಾರೆಂದು ಹೇಳಲಾಗಿದೆ.
ಬಾಲಕೃಷ್ಣ ಗೌಡರ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ವಿಚಾರಣೆಗೊಳಪಡಿಸಲಾಗುವುದು. ಆದರೆ, ಅಗತ್ಯ ಬಿದ್ದರೆ ಬಂಧಿಸುವ ಅಧಿಕಾರವೂ ನಮ್ಮ ಪೊಲೀಸರಿಗೆ ಇದೆ ಎಂದು ಗಾಂವ್‌ಕರ್ ಹೇಳಿದ್ದಾರೆ.
ಸೆ.22ರಂದು ಬಾಲಕೃಷ್ಣ ಎಂಬ ನಿವೃತ್ತ ಸರ್ಕಾರಿ ಅಧಿಕಾರಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಬಾಲಕೃಷ್ಣ ಗೌಡ 500 ಕೋಟಿ ರೂಗಳ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದರು.
ನನ್ನ ಆದಾಯ ಕೇವಲ 30 ಲಕ್ಷ ರೂ. ಮಾತ್ರ ನಾನು ತನಿಖೆಗೆ ಸಿದ್ಧ ಎಂದು ಬಾಲಕೃಷ್ಣಗೌಡ ಪ್ರತಿ ಸವಾಲು ಹಾಕಿದ್ದರು.












Click it and Unblock the Notifications