ಕಿಷ್ಕಿಂದೆ ಅಮ್ಮ ಬಳ್ಳಾರಿ ರೆಡ್ಡಿಗೆ ಶಾಪ ಕೊಟ್ಟಳೇ?

ಹಂಪೆ, ಆನೆಗೊಂದಿ, ಕಿಷ್ಕಿಂದೆ ಮುಂತಾದ ಪ್ರಮುಖ ಐತಿಹಾಸಿಕ ಸ್ಥಳಗಳ ಪ್ರವಾಸೋದ್ಯಮ ಅಭಿವೃದ್ಧಿ, ಹೆಲಿ ಟೂರಿಸಂ ಸೌಲಭ್ಯ ಒದಗಿಸುವ ಮಾತಾಡಿದ್ದ ಅಂದಿನ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಪ್ರಮುಖ ಶಕ್ತಿ ದೇವತೆಗಳ ಶಾಪ ತಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ಆಂಧ್ರಪ್ರದೇಶ ಗಡಿಭಾಗದ ಭೂ ಒತ್ತುವರಿ ಸಂದರ್ಭದಲ್ಲಿ ಸುಗ್ಗಲ್ಲಮ್ಮ ಗುಡಿಯನ್ನು ಕೆಡವಿದ ರೆಡ್ಡಿಗಳು ಇಂದು ಜೈಲಿನಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಇಲ್ಲಿನ ದೇಗುಲಕ್ಕೆ ಭೇಟಿ ನೀಡದಿರುವುದರಿಂದ ಜನಾರ್ದನ ರೆಡ್ಡಿ ಕುಟುಂಬಕ್ಕೆ ಅಮ್ಮನ ಕೃಪೆ ಸಿಕ್ಕಿಲ್ಲ. ಗುಡ್ಡದ ಮೇಲೆ ಆಗಾಗ ಕಾಣಿಸುತ್ತಿದ್ದ ಸರ್ಪ ಕೂಡಾ ಇತ್ತೀಚೆಗೆ ಕಾಣಿಸಿಕೊಂಡಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ನವರಾತ್ರಿ ಸಂಭ್ರಮ: 9 ದಿನಗಳ ನವರಾತ್ರಿ ಉತ್ಸವದಲ್ಲಿ ದಿನಂ ಪ್ರತಿ ಶ್ರೀದೇವಿ ಪುರಾಣ ಭಕ್ತಿ ಸಂಗೀತ ಭಜನಾ ಮಂಡಳಿ ಸದಸ್ಯರಿಂದ ಭಜನೆ ಪಲ್ಲಕ್ಕಿ ಸೋವಾ ಲಲಿತಾ ಸಹಸ್ರನಾಮ ಪಾರಾಯಣ, ಅಷ್ಟೋತ್ತರ, ಕುಂಕಮಾರ್ಚನೆ, ಅಷ್ಟಾವದಾನ ಸೇವೆ ಸೇರಿದಂತೆ ಮತ್ತಿತರ ವೈವಿದ್ಯ ಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ನವರಾತ್ರಿ ನಿಮಿತ್ಯ ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ಮಹಾಚಂಡಿಯಾಗ ಜರುಗುತ್ತಿದ್ದು ವಿಜಯ ದಶಮಿ ದಿನದಂದು ಗಜ ಅಂಬಾರಿ ಮೇಲೆ ಅಮ್ಮನವರ ಭವ್ಯ ಮೆರವಣಿಗೆ ಜರುಗಲಿದೆ ಎಂದು ದೇವಸ್ಥಾನದ ಅರ್ಚಕ ಬ್ರಹ್ಮಯ್ಯಸ್ವಾಮಿ ತಿಳಿಸಿದ್ದಾರೆ.












Click it and Unblock the Notifications