ಕೊಡಗಿನ ಜಮ್ಮಾ ಮಲೆ : ವಾಪಸ್ ಕೊಟ್ಟವರಿಗೆ ಬೆಲೆ

CP Yogeshwar, Forest minister
ಮಡಿಕೇರಿ, ಸೆ. 28 : ಕೊಡಗಿನ ಅರಣ್ಯ ಭೂಮಿಯನ್ನು ಸ್ಥಳೀಯರ ಸ್ವಇಚ್ಛೆಯಿಂದ ಸರ್ಕಾರ ಹಿಂಪಡೆಯಲು ಚಿಂತನೆ ನಡೆಸಿದ್ದು, ಜಮೀನು ಹಿಂದಿರುಗಿಸುವ ರೈತರಿಗೆ ಸೂಕ್ತ ಪರಿಹಾರ ನೀಡಲು ಸರಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ ಎಂದು ಅರಣ್ಯ ಸಚಿವರಾದ ಸಿ.ಪಿ. ಯೋಗೇಶ್ವರ ಅವರು ಹೇಳಿದ್ದಾರೆ.

ಸೆ.28ರಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ದಿನಾಂಕ 23.09.2011ರ ಮಾಧ್ಯಮಗಳ ಹೇಳಿಕೆಯಲ್ಲಿ ಜಮ್ಮಾ ಮಲೆಯ ಬದಲು ಜಮ್ಮಾಬಾಣೆ ಎಂಬುದಾಗಿ ತಪ್ಪಾಗಿ ವರದಿಯಾಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೊಡಗಿನ ನಾಗರಿಕರಿಗೆ ಸ್ಪಷ್ಟನೆ ನೀಡಿರುವ ಯೋಗೇಶ್ವರ ಅವರ ಪತ್ರಿಕಾ ಹೇಳಿಕೆ ಕೆಳಗಿನಂತಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಮತ್ತು ಇತರೆ ಕಡೆ ಪಾರಂಪರಿಕ ಏಲಕ್ಕಿ ಕೃಷಿಗಾಗಿ ಅಲ್ಲಿಯ ಕೃಷಿಕರಿಗೆ ಅರಣ್ಯ ಭೂಮಿಯನ್ನು ಕೇವಲ ಕೃಷಿ ಮಾಡುವುದಕ್ಕಾಗಿ ಬ್ರಿಟಿಷರ ಆಡಳಿತ ಅವಧಿಯ 1900ನೇ ಇಸವಿಯಲ್ಲಿ ಅನುಮತಿ ನೀಡಲಾಗಿತ್ತು.

ಸದರಿ ಪ್ರದೇಶದಲ್ಲಿ ನಿತ್ಯಹರಿದ್ವರ್ಣದಿಂದ ಕೂಡಿದ ದಟ್ಟ ಅರಣ್ಯ ಇರುತ್ತದೆ. ಇಂತಹ ಪ್ರದೇಶವನ್ನು ಜಮ್ಮಾಮಲೆ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಮ್ಮಾಮಲೆ ಮೇಲಿನ ಒಡೆತನವನ್ನು ಹಲವಾರು ಕೃಷಿಕರು ಸಂಪೂರ್ಣವಾಗಿ ಸರ್ಕಾರಕ್ಕೆ ಹಸ್ತಾಂತರಿಸಲು ಮುಂದೆ ಬಂದಿರುತ್ತಾರೆ ಮತ್ತು ಇದಕ್ಕಾಗಿ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಸಹ ಬಯಸಿರುತ್ತಾರೆ.

ಈ ವಿಚಾರವಾಗಿ ಮುಖ್ಯಮಂತ್ರಿಗಳು, ವಿಧಾನಸಭಾ ಸಭಾಧ್ಯಕ್ಷರು, ಅರಣ್ಯ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದಿನಾಂಕ 14.09.2011ರಂದು ಸಭೆ ನಡೆಸಲಾಗಿದ್ದು, ಕೃಷಿಕರಿಗೆ ಪರಿಹಾರ ನೀಡಲು ರು. 60 ಕೋಟಿ ಪರಿಹಾರ ನಿಧಿಯ ಅವಶ್ಯಕತೆ ಇರುತ್ತದೆ. ಈ ಬಗ್ಗೆ ಪ್ರಸ್ತಾವನೆಯನ್ನು ತಯಾರಿಸಿ, ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆಯಲು ಕಡತ ಮಂಡಿಸಲು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+