ಎವೆರೆಸ್ಟ್ ವಿಮಾನ ಪತನ, 10 ಭಾರತೀಯರು ಸಾವು

ಮೃತಪಟ್ಟ 18 ಜನರಲ್ಲಿ 10 ಮಂದಿ ಭಾರತೀಯರು ಇದ್ದರು. ಮೃತರೆಲ್ಲರೂ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ನೇಪಾಳದ ಖಾಸಗಿ ವಾಹಿನಿಗಳು ಸ್ಪಷ್ಟಪಡಿಸಿದೆ.
ಬುದ್ಧ ಏರ್ ಸಂಸ್ಥೆಗೆ ಸೇರಿದ ಈ ವಿಮಾನ ಮೊದಲಿಗೆ ಒಂದು ಗಂಟೆಗಳಿಗೂ ಅಧಿಕ ಕಾಲ ನಾಪತ್ತೆಯಾಗಿತ್ತು, ಲೂಕ್ಲಾ ವಿಮಾನ ನಿಲ್ದಾಣದಲ್ಲಿ ಕಂಟ್ರೋಲ್ ರೂಮ್ ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಎವೆರೆಸ್ಟ್ ಪರ್ವತ ವೀಕ್ಷಿಸಿ ಕಠ್ಮಂಡು ವಿಮಾನ ನಿಲ್ದಾಣಕ್ಕೆ ಹಿಂತುರುಗುವ ವೇಳೆಯಲ್ಲಿ ಕುಂಬು ಕಣಿವೆಗಳ ಮಧ್ಯೆ ಮಂಜು ಮುಸುಕಿದ ವಾತಾವರಣದಲ್ಲಿ ಸಿಲುಕಿದ ವಿಮಾನ, ಬೆಳಗ್ಗೆ 7.31 ರ ನಾಪತ್ತೆಯಾಗಿತ್ತು.
ಆನಂತರ ವಿಮಾನ, ಲಲಿತ್ ಪುರ್ ಎಂಬ ಪ್ರದೇಶದ ಮನೆಯೊಂದಕ್ಕೆ ಢಿಕ್ಕಿ ಹೊಡೆದು ಕುಸಿದಿದೆ. ಮೃತ ಪಟ್ಟವರ ಪೂರ್ಣ ವಿವರಗಳು ಇನ್ನೂ ಸಿಕ್ಕಿಲ್ಲ.












Click it and Unblock the Notifications