ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿ ಸಿಬಿಐ ತನಿಖೆಗೆ: ಭಾರದ್ವಾಜ್ ಗೆ ಭಾರಿ ಸಂತಸ

By Srinath
|
Google Oneindia Kannada News

reddy-amc-cbi-investigation-governor-welcomes
ನವದೆಹಲಿ, ಸೆ.24 : ಬಳ್ಳಾರಿ ಹಾಗೂ ಅನಂತಪುರ ಜಿಲ್ಲೆಗಳಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿರುವ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪ್ರತಿಪಕ್ಷಗಳು ಸ್ವಾಗತಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಧರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಇದೇ ವೇಳೆ, ಸುಪ್ರೀಂ ಕೋರ್ಟ್ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವುದು ಆಶಾದಾಯಕ ಬೆಳವಣಿಗೆ ಎಂದು ರಾಜ್ಯಪಾಲ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಚಿವ ಜನಾರ್ದನರೆಡ್ಡಿ ಮಾಲಕತ್ವದ ಎಎಂಸಿ ಕಂಪನಿಯು ರಾಜ್ಯದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ಸವಿವರವಾದ ವರದಿಯನ್ನು ಈಗಾಗಲೆ ರಾಜ್ಯ ಲೋಕಾಯುಕ್ತ ಸಂಸ್ಥೆ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ರಾಜ್ಯ ಸರಕಾರ ಯಾವ ಕ್ರಮವನ್ನು ತೆಗೆದುಕೊಳ್ಳದೆ ಕಾಲಹರಣ ಮಾಡುತ್ತಿದೆ. ರಾಜ್ಯದ ಬುದ್ಧಿವಂತ ಸಮಾಜ ಈ ಬಗ್ಗೆ ದನಿ ಎತ್ತದಿರುವುದು ಅಚ್ಚರಿಯ ಸಂಗತಿ ಎಂದು ಭಾರದ್ವಾಜ್ ವಿಷಾದಿಸಿದರು.

ರಾಜ್ಯದ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರು ಅಕ್ರಮ ಗಣಿಗಾರಿಕೆ ಕುರಿತಾದ ಲೋಕಾಯುಕ್ತ ವರದಿಯು ಅಪೂರ್ಣವಾಗಿದೆ. ಸಹಜ ನ್ಯಾಯ ಪಾಲಿಸಿಲ್ಲ ಎಂದು ಹೇಳಿರುವುದು 'ಸಹಜವಾಗಿಯೇ ಇದೆ' ಎಂದು ವ್ಯಂಗ್ಯವಾಡಿರುವ ಭಾರದ್ವಾಜ್, ಆಚಾರ್ಯರ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

English summary
Karnataka Governor HR Bhardwaj welcomes Supreme Court direction to CBI to investigate Reddy's AMC illegal minig in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X