ಚಿದು ನಂತರ ಪ್ರಣಬ್ ಕೊರಳಿಗೆ 2ಜಿ ಜಾಲ

Pranab Mukherjee
ನವದೆಹಲಿ, ಸೆ.23: 2ಜಿ ತರಂಗಾಂತರ ಹಗರಣದ ಆರೋಪ ಹೊರೆಸಿ ಗೃಹ ಸಚಿವ ಪಿ.ಚಿದಂಬರಂ ಅವರ ಮೇಲೆ ಆರ್ಥಿಕ ಸಚಿವ ಪ್ರಣವ್ ಮುಖರ್ಜಿ ಬಿಟ್ಟ ಬಾಣ ತಿರುಗುಬಾಣವಾಗಿ ಪರಿಣಮಿಸಿದೆ.

2008ರಲ್ಲಿ ತರಂಗಾಂತರ ಹಂಚಿಕೆಯಾಗುವ ಎರಡು ವಾರ ಅಂದು ವಿದೇಶಾಂಗ ಸಚಿವರಾಗಿದ್ದ ಮುಖರ್ಜಿ ಅವರು ಪ್ರಧಾನಿ ಕೋರಿಕೆಯಂತೆ ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ 'ದೂರಸಂಪರ್ಕ ಖಾತೆಯು ತರಂಗಾಂತರ ಹಂಚಿಕೆಗೆ ಜಾರಿಯಲ್ಲಿರುವ ನೀತಿಯನ್ನೇ ಮುಂದುವರಿಸಬಹುದು' ಎಂದು ಸ್ಪಷ್ಟಪಡಿಸಿದ್ದರು ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯಿಂದ ತಿಳಿದು ಬಂದಿದೆ.

ಇದರಿಂದ ವಿವಾದ ಹೊಸ ತಿರುವು ಪಡೆಯುವುದರ ಜತೆಗೆ ಇನ್ನಷ್ಟು ಕಾವೇರುತ್ತಿದೆ. ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಸಚಿವರ ತಂಡದ ಮುಖ್ಯಸ್ಥರಾಗಿದ್ದ ಮುಖರ್ಜಿ ಟಿಪ್ಪಣಿಯಲ್ಲಿ 'ಭವಿಷ್ಯದಲ್ಲಿ ತರಂಗಾಂತರ ಹಂಚಿಕೆಯ ವ್ಯವಹಾರಗಳನ್ನು ಸಾರ್ವಜನಿಕರ ಗಮನಕ್ಕೆ ತಂದು ಪಾರದರ್ಶಕ ನೀತಿಯನ್ನು ಅಳವಡಿಸಬೇಕು' ಎಂದು ಶಿಫಾರಸು ಮಾಡಿದ್ದರು.

ವಕೀಲರಾದ ವಿವೇಕ್ ಗರ್ಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ, ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಪತ್ರ ವ್ಯವಹಾರಗಳ ವಿವರ ಲಭ್ಯವಾಗಿದೆ.

ಚಿದು ರಾಜೀನಾಮೆಗೆ ವೇದಿಕೆ ಸಿದ್ಧ: ವಿದೇಶ ಪ್ರವಾಸಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಚಿದಂಬರಂ ಅವರಿಗೆ ಕರೆ ಮಾಡಿದಾಗ ಚಿದಂಬರಂ ಅವರು ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ಹೇಳಿದ್ದಾರಂತೆ. ಬಿಜೆಪಿ ಈಗಾಗಲೇ ಚಿದಂಬರಂ ವಿರುದ್ಧ ಪ್ರತಿಭಟನೆ ಶುರು ಮಾಡಿದೆ. ಕರುಣಾನಿಧಿ ಕೂಡಾ ಚಿದಂಬರಂ ಆದಷ್ಟು ಬೇ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+