400 ಕೋಟಿ ಅಕ್ರಮ: ಭ್ರಷ್ಟ ತಿಮಿಂಗಲಕ್ಕೆ ಮೋದಿ ಜೀವದಾನ

ಗುಜರಾತ್‌ನ 58 ದೊಡ್ಡ ಜಲಾಶಯಗಳ ಮೀನುಗಾರಿಕೆ ಗುತ್ತಿಗೆಗಳನ್ನು ಪ್ರಶ್ನಿಸಿ 2008ರ ಸೆಪ್ಟಂಬರಿನಲ್ಲಿ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ವರ್ಷಕ್ಕೆ ರೂ. 40 ಕೋಟಿ ಬೆಲೆ ಬಾಳುವ ಗುತ್ತಿಗೆಯನ್ನು ಕೇವಲ ರೂ. 2.36 ಕ್ಕೆ ನೀಡಲಾಗಿದೆ. ಬರೋಬ್ಬರಿ 10 ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆಯೆಂದು ಆರೋಪಿಸಿ ಪಾಲನ್ಪುರ ಜಿಲ್ಲೆಯ ಭಾಗಲ್ ಗ್ರಾಮದ ಇಶಾಕ್ ಮರಾಡಿಯಾ ಎಂಬವರು ದೂರು ಸಲ್ಲಿಸಿದ್ದರು.
ಸೋಳಂಕಿ ತಮ್ಮಿಂದ ರೂ. 10 ಲಕ್ಷದಿಂದ 30 ಲಕ್ಷದ ವರೆಗೆ ಲಂಚ ಕೇಳಿದ್ದರು. ಅವರು ಗುತ್ತಿಗೆದಾರರಿಂದ ರೂ. 11 ಕೋಟಿಯಷ್ಟು ಲಂಚ ಸಂಗ್ರಹಿಸಿದ್ದರು ಎಂದೂ ಮರಾಡಿಯಾ ಮತ್ತಿತರ ದೂರುದಾರರು ಆರೋಪಿಸಿದ್ದರು.
2008ರ ನವೆಂಬರಿನಲ್ಲಿ ನ್ಯಾಯಮೂರ್ತಿಗಳಾದ ಆರ್.ಎಂ. ದೋಷಿತ್ ಹಾಗೂ ಶರದ್ ದವೆಯವರಿದ್ದ ದ್ವಿಸದಸ್ಯ ಹೈಕೋರ್ಟ್ ಪೀಠವು ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತೀರ್ಪು ನೀಡಿ, ಮರು ಟೆಂಡರಿಗೆ ಆದೇಶಿಸಿದ್ದರು.
ಸಚಿವರು ತಪ್ಪು ಮಾಡಿದ್ದಾರೆಂಬ ಪೀಠದ ಆದೇಶದಿಂದ ಉತ್ತೇಜಿತರಾದ ಅರ್ಜಿದಾರರು ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಮರು ಟೆಂಡರ್ ಕರೆಯಬೇಕೆಂಬ ಹೈಕೋರ್ಟ್ ಆದೇಶಕ್ಕೆ ಎರಡು ವರ್ಷ ಸಂದಿದೆ. ಆದರೆ, ಅರ್ಜಿದಾರರು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದಾರೆ.












Click it and Unblock the Notifications