ಹಸುಳೆಯ ರೇಪ್, ಹತ್ಯೆ: ಸೆರೆಸಿಕ್ಕ ವೆಲ್ಲೂರು ಪೂಜಾರಿ

ಗುಡಿಯಾತ್ತಂನ ಕೆ ಕುಮಾರ ಗುರುಕ್ಕಲ್ ಸೋಮವಾರದಂದು ಹಸುಳೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದ. ಶವವನ್ನು ತನ್ನ ಮನೆಯಲ್ಲೇ ಬಚ್ಚಿಟ್ಟಿದ್ದು, ಮಂಗಳವಾರ ರಾತ್ರಿ ಬಾವಿಗೆ ಎಸೆದಿದ್ದ. ಸ್ಥಳೀಯ ರೈತರೊಬ್ಬರು ಬುಧವಾರ ಬೆಳಗ್ಗೆ ತಮ್ಮ ತೋಟದ ಬಾವಿಯಲ್ಲಿ ಮಗುವಿನ ಶವ ಬಿದ್ದಿರುವುದನ್ನು ಪತ್ತೆಹಚ್ಚಿದ್ದರು. ಕುಟುಂಬದವರಿಂದ ದೂರವಾಗಿರುವ ಆರೋಪಿ, ಕಳೆದ 16 ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಕುಮಾರ ಗುರುಕ್ಕಲ್ ಮನೆಯು ಮೃತ ಮಗುವಿನ ಮನೆಯ ಬಳಿಯೇ ಇದೆ. ಜತೆಗೆ, ಐದು ವರ್ಷದ ಹಿಂದೆಯೂ ಇಂತಹುದೇ ಅಪರಾಧವೆಸಗಿದ್ದ. ಅದೇ ಅನುಮಾನದ ಮೇಲೆ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ತಾನೇ ಕುಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಮಧ್ಯೆ, ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರವಾಗಿರುವುದು ಮತ್ತು ಉಸಿರುಗಟ್ಟಿಸಿ ಸಾಯಿಸಿರುವುದು ಶವಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications