ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಡಿವಿಎಸ್ ಮೇಲಿದ್ದ ಬಿಡಿಎ ಒತ್ತುವರಿ ಭೂತ

By Mahesh
|
Google Oneindia Kannada News

DV Sadananda Gowda
ಬೆಂಗಳೂರು, ಸೆ.20: ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಬಿಡಿಎ ಜಾಗವನ್ನು ಒತ್ತುವರಿ ಮಾಡಿದ್ದಾರೆ ಹಾಗೂ ಬಿಬಿಎಂಪಿ ಕಟ್ಟಡ ನಿರ್ಮಾಣ ನಿಯಮಗಳನ್ನು ಮುರಿದಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಶಿವಕುಮಾರ್ ಆರೋಪಿಸಿದ್ದರು.

ದಕ್ಷಿಣ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ ವಸತಿ ನಿವೇಶನ ಜಾಗದಲ್ಲಿ ವಾಣಿಜ್ಯ ಸಂಕೀಣ ನಿರ್ಮಾಣದ ಆರೋಪ ಎದುರಾಗಿತ್ತು.

5000 ಚ.ಅ ವಿಸ್ತೀರ್ಣದ ನಿವೇಶನವನ್ನು 2006ರಲ್ಲಿ ಸದಾನಂದ ಗೌಡರು ಪದೆದಿದ್ದರು. ಇದಕ್ಕೆ ಹೊಂದಿಕೊಂಡಂತೆ ಬಿಜೆಪಿ ಸಚೇತಕರಾಗಿದ್ದ ಡಿ.ಎನ್ ಜೀವರಾಜ್ ಅವರು ನಿವೇಶನವನ್ನು ಹಂಚಿಕೊಂಡು ಕಟ್ಟಡ ನಿರ್ಮಿಸುತ್ತಿದ್ದರು.

ಬಿಡಿಎ ಅನುಮತಿ ಇಲ್ಲದೆ ಹೆಚ್ಚುವರಿ ಅಂತಸ್ತು ನಿರ್ಮಾಣ ಹಾಗೂ ಜಾಗ ಒತ್ತುವರಿ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದರು. ಬೇಸ್ ಮೆಂಟ್ ನಲ್ಲಿ ಕಾರು ಪಾರ್ಕಿಂಗ್ ಹಾಗೂ ಮೊದಲ ಅಂತಸ್ತಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಗುರಿ ಹೊಂದಲಾಗಿದೆ.

English summary
After resignation of Lokayukta Shivaraj Patil for allegedly involving in land scam, National media repeatedly asking why can't be CM DV Sadananda Gowda step down. Since CM DVS also faced similar allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X