ಲೋಕಾಯುಕ್ತ ರಾಜೀನಾಮೆ ಆಯ್ತು ಮುಂದೆ ಡಿವಿಎಸ್ ಸರದಿ?

ಅಗಸ್ಟ್ ತಿಂಗಳಿನಲ್ಲಿ ಮುಖ್ಯಮಂತ್ರಿ ಪಟ್ಟಕ್ಕೇರುವ ಸಂದರ್ಭದಲ್ಲಿ ಸದಾನಂದ ಗೌಡರ ಮೇಲೆ ಭೂ ಒತ್ತುವರಿ, ಬಿಬಿಎಂಪಿ ನಿಯಮ ಉಲ್ಲಂಘನೆ ಆರೋಪ ಹೊರೆಸಲಾಗಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ವಾದ ವಿವಾದ ನಡೆದಿತ್ತು.
ಆರ್ ಟಿಐ ಕಾರ್ಯಕರ್ತರ ಪರ ವಕೀಲೆ ನಾಗರತ್ನ ಅವರು ಮಂಡಿಸಿದ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಸದಾನಂದ ಗೌಡರಿಗೆ ಕ್ಲೀನ್ ಚಿಟ್ ನೀಡಿದ್ದರು.
ಆದರೆ, ಈ ಪ್ರಕರಣ ಕಿಡಿಯನ್ನು ಹಾಗೆ ಉಳಿಸಿಕೊಂಡಿದ್ದ ಕೆಲ ಮಾಧ್ಯಮಗಳು, ಲೋಕಾಯುಕ್ತ ಶಿವರಾಜ್ ಪಾಟೀಲ್ ರಾಜೀನಾಮೆ ನಂತರ ಮತ್ತೆ ಪ್ರಕರಣಕ್ಕೆ ಬೆಂಕಿ ಹಚ್ಚಿ, ಅಬ್ಬರಿಸುತ್ತಿದೆ.
ಆದರೆ, ಸದಾನಂದ ಗೌಡರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಮುಗಿದ ಹೋದ ಪ್ರಕರಣ ಎಂದು ಹೇಳಿದ್ದಾರೆ.
ಲೋಕಾಯುಕ್ತ ಪಾಟೀಲರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ, ಹೊಸ ಲೋಕಾಯುಕ್ತರ ನೇಮಕಾತಿ ಬಗ್ಗೆ ಚರ್ಚಿಸಿದ್ದಾರೆ.
ಇಷ್ಟಕ್ಕೂ ಡಿವಿ ಸದಾನಂದ ಗೌಡ ಅವರ ಮೇಲಿದ್ದ ಆರೋಪವೇನು ?...












Click it and Unblock the Notifications