ಜನಾರ್ದನ ರೆಡ್ಡಿ ಕಣ್ಣೀರ ಹಿಂದಿನ ಸತ್ಯ ಕಥೆ

ರೆಡ್ಡಿ ಆಪ್ತ ಮೂಲಗಳ ಪ್ರಕಾರ, ಉದಯ್ ಲಲಿತ್ ಅವರು 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಬಿಐ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಉದಯ್ ಲಲಿತ್ ಅವರು ಹೈದರಾಬಾದ್‌ನ ನಾಂಪಲ್ಲಿ ಕೋರ್ಟ್‌ನಲ್ಲಿ ಸಿಬಿಐಗೆ ವಿರುದ್ಧವಾಗಿ ಗಣಿ ಹಗರಣದ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ಜಿ. ಜನಾರ್ದನ ರೆಡ್ಡಿ ಮತ್ತು ಬಿ.ವಿ. ಶ್ರೀನಿವಾಸ ರೆಡ್ಡಿಯ ಪರವಾಗಿ ವಾದ ಮಂಡಿಸುತ್ತಿದ್ದಾರೆ.
ಓರ್ವ ಹಿರಿಯ ನ್ಯಾಯವಾದಿ ಸಿಬಿಐಗೆ ಪರ ಮತ್ತು ವಿರುದ್ಧವಾಗಿ ಎರಡು ಭಿನ್ನ ಪ್ರಕರಣಗಳಲ್ಲಿ ವಾದ ಮಂಡಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ರೆಡ್ಡಿಗಳ ಪ್ರಕರಣದ ಪರವಾಗಿ ವಾದ ಮಂಡಿಸಲು ಉದಯ್ ಲಲಿತ್ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಜಾಮೀನು ಸಿಗಲು ಹುಲ್ಲುಕಡ್ಡಿಯ ಆಸರೆಯಂತಾಗಿದ್ದ ಉದಯ್ ಲಲಿತ್ ಅವರೂ ಕೈಜಾರುತ್ತಿರುವುದನ್ನು ಮನಗಂಡ ಜನಾರ್ದನ ರೆಡ್ಡಿ ಅವರು ಸೋಮವಾರ ಹೈಕೋರ್ಟ್‌ನಲ್ಲೇ ಉದಯ್ ಲಲಿತ್ ಅವರ ಕಾಲಿಗೆ ಬಿದ್ದು, ಕಣ್ಣೀರು ಸುರಿಸಿ ತಮ್ಮ ಪ್ರಕರಣದ ವಾದ ಮಂಡಿಸಲು ಕೋರಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications