ಅಸಹ್ಯಕರ ಸೆಕ್ಸ್ ಬೇಡಿಕೆ, ಹೆಂಡತಿಯಿಂದ ಗಂಡನ ಹತ್ಯೆ

ಪ್ರೇಮನಗರ ನಿವಾಸಿಯಾಗಿರುವ ಅನಿತಾ (30) ತನ್ನ ಗಂಡ ರಾಮಚರಣನನ್ನು ಭಾನುವಾರ ರಾತ್ರಿ ಕೊಂದನಂತರ ತಾನೇ ಸ್ವತಃ ಪಥಖೇಡ ಪೊಲೀಸ್ ಸ್ಟೇಷನ್ನಿಗೆ ಹೋಗಿ ಶರಣಾಗಿದ್ದಾಳೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಅಸಹ್ಯಕರವಾಗಿ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದುದು ಮಾತ್ರವಲ್ಲ ಅದನ್ನು ನಿರಾಕರಿಸಿದಾಗ ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಎಂದು ಅನಿತಾ ಪೊಲೀಸರಿಗೆ ತಿಳಿಸಿದ್ದಾಳೆ. ಭಾನುವಾರ ಕೂಡ ಇಬ್ಬರ ನಡುವೆ ಜಗಳ ನಡೆದಿದೆ. ಆತ ಆಕೆಯನ್ನು ಹೊಡೆಯಲು ತೆಗೆದುಕೊಂಡಿದ್ದ ಕಲ್ಲನ್ನು ಕಿತ್ತುಕೊಂಡು ತಲೆಗೆ ಏಟು ಹಾಕಿದ್ದಾಳೆ.
ಹೆಂಡತಿ ಹೊಡೆದ ಹೊಡೆತಕ್ಕೆ ರಾಮಚರಣ ಸ್ಥಳದಲ್ಲಿಯೇ ಹತನಾಗಿದ್ದಾನೆ. ನಂತರ ಇಬ್ಬರು ಚಿಕ್ಕಮಕ್ಕಳೊಂದಿಗೆ ಪೊಲೀಸರಿಗೆ ಹೋಗಿ ಶರಣಾಗಿದ್ದಾಳೆ ಅನಿತಾ. ಆಕೆಯನ್ನು ಬಂಧಿಸಿರುವ ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications