ಮೋದಿ ಉಪವಾಸ ಆರಂಭ, ಶಿವಸೇನೆ ಬೆಂಬಲ

ಗುಜರಾತ್ ವಿಶ್ವವಿದ್ಯಾಲಯ ತನ್ನ ಏರ್ ಕಂಡೀಷನ್ ಕಟ್ಟಡದಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ಉಪವಾಸ ವ್ರತ ಆರಂಭಿಸಿದ್ದಾರೆ.
ಗುಜರಾತ್ ವಿವಿ ಕಟ್ಟಡ ಹಾಲ್ ಬಾಡಿಗೆ ದಿನಕ್ಕೆ ಬಾಡಿಗೆ 5 ಲಕ್ಷ ರೂ. ಇದೆ. ಆದರೆ, ಮೋದಿ ಮೋಡಿಯಲ್ಲಿರುವ ವಿವಿ, ಉಚಿತವಾಗಿ ಎಲ್ಲಾ ಸೌಲಭ್ಯ ಒದಗಿಸಿದೆ.
ನಾಯಕರ ದಂಡು: ಪಂಜಾಬ್ ಸಿಎಂ ಪ್ರಕಾಶ್ ಸಿಂಗ್ ಬಾದಲ್, ಜಯಲಲಿತಾ,ಎಲ್ ಕೆ ಆಡ್ವಾಣಿ, ನಿತಿನ್ ಗಡ್ಕರಿ, ರಾಜ್‌ನಾಥ್‌ಸಿಂಗ್, ನಟಿ ಸ್ಮೃತಿ ಇರಾನಿ, ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್,ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಈ ಉಪವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ತಮ್ಮ ತಾಯಿಯ ಕಾಲಿಗೆರಗಿ ಆಶೀರ್ವಾದ ಬೇಡಿದ ನರೇಂದ್ರ ಮೋದಿ, ನಾಡಿನ ಶಾಂತಿ, ಸೌಹಾರ್ದತೆಗಾಗಿ ಕೈಗೊಂಡಿರುವ ಉಪವಾಸ ವ್ರತ ಸಂಕಲ್ಪ ನಿರ್ವಿಘ್ನವಾಗಿ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ 61ನೇ ಹುಟ್ಟು ಹಬ್ಬದ ದಿನದಂದೇ ಉಪವಾಸ ಆಚರಿಸುತ್ತಿರುವುದು ವಿಶೇಷ.












Click it and Unblock the Notifications