ನರೇಂದ್ರ ಮೋದಿ ಸದ್ಭಾವನಾ ಉಪವಾಸ Full Coverage

ಗುಜರಾತ್ ಸಿಎಂ ಮೋದಿ ಅವರು 10 ಗಂಟೆ ಸುಮಾರಿಗೆ ತಮ್ಮ ಮೂರು ದಿನಗಳ ಕಾಲದ ಉಪವಾಸ ವ್ರತಕ್ಕೆ ಚಾಲನೆ ನೀಡಿದರು. ತಾಯಿ ನರ್ಮದಾ ಬಾಯಿ ಅವರ ಆಶೀರ್ವಾದ ಪಡೆದು ವೇದಿಕೆ ಏರಿದರು. ಮೋದಿ ಉಪವಾಸ ಕುರಿತ ಸಮಗ್ರ ಸುದ್ದಿ ಟೈಮ್ ಲೈನ್ ಇಲ್ಲಿದೆ.
11.45AM:
* ಗುಜರಾತ್ ಏಳಿಗೆ ಸಹಿಸದೆ ಅನೇಕ ಮಂದಿ ಹಲವಾರು ರೀತಿ ಅಡೆ ತಡೆ ಒಡ್ಡಿದರೂ ಮೋದಿ ಅವರು ಗುಜರಾತ್ ಅನ್ನು ಸಂಭಾಳಿಸಿ, ಬೆಳೆಸುತ್ತಿರುವ ರೀತಿ ಎಲ್ಲರಿಗೂ ಮಾದರಿಯಾಗಿದೆ.
* ಮೋದಿ ಅವರ ಉಪವಾಸಕ್ಕೆ ದೇಶದ ಎಲ್ಲೆಡೆಯಿಂದ ಬಂದಿರುವ ಗಣ್ಯರು, ರಾಜಕೀಯ ನಾಯಕರನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ- ಅರುಣ್ ಜೇಟ್ಲಿ
11.30AM:
* ಅರುಣ್ ಜೇಟ್ಲಿ ಭಾಷಣ ಆರಂಭ, ಪ್ರೇಕ್ಷಕರಲ್ಲಿ ಮಿಂಚಿನ ಸಂಚಾರ
11.15AM:
* ಮೋದಿ ಅವರ ಸಂಕಲ್ಪ ಸಿದ್ದಿಸಲಿ ಎಲ್ಲಾ ಮುಖ್ಯಮಂತ್ರಿಗಳ ಸಮಾವೇಶದ ಲ್ಲಿ ಪ್ರಕಾಶ್ ಸಿಂಗ್ ಬಾದಲ್ ಹೇಳಿಕೆ. ನವದೆಹಲಿಯಲ್ಲೂ ಸದ್ಭಾವನಾ ಉಪವಾಸ ಅಗತ್ಯತೆ ಬಗ್ಗೆ ಮನವಿ.
11.10AM:
* ಗುಜರಾತ್ ಇಂದು ಭ್ರಷ್ಟಾಚಾರ ಮುಕ್ತ ರಾಜ್ಯವಾಗಿದೆ. ಇದರ ಹಿಂದೆ ಮೋದಿ ಅವರ ಪರಿಶ್ರಮ ಎದ್ದು ಕಾಣುತ್ತದೆ.
* ಸದ್ಭಾವನಾ ಉಪವಾಸ ಬಗ್ಗೆ ಜನರಲ್ಲಿ ಇದ್ದ ಗೊಂದಲ ಈಗ ನಿವಾರಣೆಯಾಗಿದೆ-ಎಲ್ ಕೆ ಅಡ್ವಾಣಿ.
* ಶೇ.11 ರಷ್ಟು ಪ್ರಗತಿ ಗಳಿಸಿದ ರಾಜ್ಯ ಮತ್ತೊಂದಿಲ್ಲ ಎಂದು ಮೋದಿಯನ್ನು ಹೊಗಳಿದ ಅಡ್ವಾಣಿ
11:00AM:
* ಪ್ರಜಾಪ್ರಭುತ್ವದಲ್ಲಿ ಶಾಂತಿ, ಸೌಹಾರ್ದತೆಗೆ ಮಾತ್ರ ಸ್ಥಾನವಿರಲಿ, ವಿಷಬೀಜ ಬಿತ್ತುವವರ ಮನಸಿನಲ್ಲಿ ಶಾಂತಿ ಬೀಜ ಬಿತ್ತೋಣ
11:02 AM:
* ಗುಜರಾತ್ ಗೆ ಬೇರೆ ರಾಜ್ಯಗಳಿಂದ ಯಾವುದೇ ಬೋಧನೆ ಬೇಕಿಲ್ಲ. ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದೇವೆ. ಅಭಿವೃದ್ಧಿ ಪಥದತ್ತ ಮಾತ್ರ ದೃಷ್ಟಿ ನೆಟ್ಟಿದೆ.
11:01AM:
* ಪಂಚಾಯತ್ ಮಟ್ಟದಿಂದ ರಾಜ್ಯಮಟ್ಟದವರೆಗೂ ಎಲ್ಲರೂ ತಮ್ಮ ಕರ್ತವ್ಯ ಅರಿತು ದುಡಿದರೆ ಏಳಿಗೆ ಎಂಬುದು ನಮ್ಮ ಮುಷ್ಟಿಯಲ್ಲಿರುತ್ತದೆ.
10:52 AM:
* ವೋಟ್ ಬ್ಯಾಂಕ್ ರಾಜಕೀಯ ಮಾಡುವ ಕೀಳು ಮಟ್ಟದ ತಂತ್ರಗಳನ್ನು ತೊಡೆದು ಹಾಕುವುದು ನಮ್ಮ ಸದ್ಭಾವನಾ ಯೋಜನೆಯ ಮುಖ್ಯ ಉದ್ದೇಶ
10:48 AM:
* ದೇಶ ಎಲ್ಲೆಡೆಯಿಂದ ಬಂದ ಉದ್ಯೋಗಾರ್ಥಿಗಳಿಗೆ ಸೂಕ್ತ ನೌಕರಿ ನೀಡುವ ಮೂಲಕ ಗುಜರಾತ್ ಎಲ್ಲರನ್ನು ಸಲುಹುತ್ತಿದೆ.
10:46 AM:
* ಗುಜರಾತ್ ಇಮೇಜ್ ಹಾಳು ಮಾಡುವ ಮಾತುಗಳಿಗೆ ನಿಮ್ಮ ಕಿವಿ ಕಿವುಡಾಗಿರಲಿ.
10:42 AM:
* ದೇಶದ ಎಲ್ಲಾ ನಾಯಕರ ಬೆಂಬಲದಿಂದ ನನ್ನ ಹೃದಯ ತುಂಬಿ ಬಂದಿದೆ.
* ಶಾಂತಿ ಸೌಹಾರ್ದತೆಯ ಪ್ರತೀಕವಾದ ಗುಜರಾತ್ ನಲ್ಲಿ 2002ರ ಗಲಭೆ ನಂತರ ಅನಗತ್ಯವಾಗಿ ನಮ್ಮ ಇಮೇಜ್ ಹಾಳು ಮಾಡುವ ಕೀಳು ತಂತ್ರ ಅನುಸರಿಸಲಾಗಿದೆ.
* ಆದರೆ, ಜನತೆಗೆ ಗುಜರಾತಿನ ಮಾನ ಸಮ್ಮಾನಗಳನ್ನು ಉಳಿಸಿ, ಬೆಳೆಸುವ ಕಲೆ ಸಿದ್ಧಿಸಿದೆ.
10:35 AM:
* ಮುಂದುವರಿದ ರಾಜ್ಯ, ಏಳಿಗೆ ಕಂಡ ರಾಜ್ಯವಾಗಿ ಗುಜರಾತ್ ಇಡೀ ಜಗತ್ತಿಗೆ ಮಾದರಿಯಾಗಿದೆ- ನರೇಂದ್ರ ಮೋದಿ.
* ಕಿಕ್ಕಿರಿದ ಜನ ಸಮೂಹವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ ನರೇಂದ್ರ ಮೋದಿ.
10.25AM:
* ಶ್ವೇತ ವಸ್ತ್ರಧಾರಿ ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ಮೈಸೂರು ಪೇಟ, ಶಾಲು ಹೊದೆಸಿ ಕರ್ನಾಟಕದ ಆರೋಗ್ಯ ಸಚಿವ ಎಸ್ ಎ ರಾಮದಾಸ್ ಅವರಿಂದ ಆತ್ಮೀಯ ಸನ್ಮಾನ.












Click it and Unblock the Notifications