ತಾಜ್ ಮಹಲ್ ಬಳಿ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ

ಸಂಜೆ 7 ಗಂಟೆಯ ಸಮಯದಲ್ಲಿ ತಾಜ್ ಮಹಲ್ ಹತ್ತಿರದಲ್ಲಿಯೇ ಇರುವ ಜೈ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ಇದು ಕಚ್ಚಾ ಬಾಂಬ್ ಆಗಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.
ಬಾಂಬನ್ನು ಆಸ್ಪತ್ರೆಯ ರಿಸೆಪ್ಶನ್ ನಲ್ಲಿ ಬ್ಯಾಗೊಂದರಲ್ಲಿ ಇಡಲಾಗಿತ್ತು. ಸ್ಫೋಟಕ್ಕೆ ಆಸ್ಪತ್ರೆಯ ಗಾಜುಗಳು ಚೂರುಚೂರಾಗಿವೆ. ರಿಸೆಪ್ಶನ್ ನಲ್ಲಿ ಇದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರು ಇಡೀ ಪ್ರದೇಶವನ್ನು ಸುತ್ತವರಿದಿದ್ದು, ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾವ ಸಂಘಟನೆಯೂ ಇದರ ಜವಾಬ್ದಾರಿಯನ್ನು ಹೊತ್ತಿಲ್ಲ.
ದೆಹಲಿಯಲ್ಲಿ ಸೆ.7ರಂದು ನಡೆದ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ ಕೆಲ ದಿನಗಳಲ್ಲಿಯೇ ಈ ಸ್ಫೋಟ ಸಂಭವಿಸಿದೆ. ದೆಹಲಿ ಸ್ಫೋಟದಲ್ಲಿ 15 ಜನ ಅಮಾಯಕರು ಅಸುನೀಗಿದ್ದಾರೆ. ಸತತವಾಗಿ ಸ್ಫೋಟಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ 24 ಗಂಟೆಯೂ ಭದ್ರತೆ ಒದಗಿಸಲು ಸರಕಾರ ನಿರ್ಧರಿಸಿದೆ.












Click it and Unblock the Notifications