ಸೆ.18ಕ್ಕೆ ಅವಿರತದಿಂದ ಬೆಟ್ಟದ ಜೀವ ಪ್ರದರ್ಶನ

ಬೆಂಗಳೂರು, ಸೆ,17: ಸದಭಿರುಚಿ ಚಿತ್ರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಿ ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಲನಚಿತ್ರದ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಅವಿರತ ಟ್ರಸ್ಟ್ ಆಯೋಜಿಸಿದೆ.
ಸೆ.18 ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಹಾಗೂ ಮಧ್ಯಾಹ್ನ 3 ಗಂಟೆಗೆ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 3 ಗಂಟೆ ಚಿತ್ರ ಪ್ರದರ್ಶನ ನಂತರ ಚಿತ್ರ ತಂಡದೊಡನೆ ಸಂವಾದ ಕಾರ್ಯಕ್ರಮವಿರುತ್ತದೆ.
ಚಿತ್ರ : ಬೆಟ್ಟದ ಜೀವ
ದಿನಾಂಕ : 18 ಸೆಪ್ಟೆಂಬರ್ 2011 ಭಾನುವಾರ
ಸಮಯ : ಬೆಳಿಗ್ಗೆ 10.30ಕ್ಕೆ ಹಾಗೂ ಮಧ್ಯಾಹ್ನ 3ಕ್ಕೆ
ಸ್ಥಳ : ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ,ಹನುಮಂತನಗರ, ಬೆಂಗಳೂರು
ಟಿಕೆಟ್ ಬೆಲೆ: ರು. 100
ಸಂಪರ್ಕಿಸಿ:
ಸತೀಶ್ ಗೌಡ: 98800 86300
ಅಭಿ : 80505 50999
ಕುಮಾರಸ್ವಾಮಿ: 98804 87682
ಪ್ರಸನ್ನ: 98808 02642
ಗಣೇಶ್: 99723 41199
ಚಿತ್ರದ ಬಗ್ಗೆ: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯನ್ನು ಆಧಾರಿಸಿದ ಈ ಚಿತ್ರವನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ. ದತ್ತಾತ್ರೇಯ, ರಾಮೇಶ್ವರಿ ವರ್ಮಾ, ಸುಚೇಂದ್ರಪ್ರಸಾದ್ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ.












Click it and Unblock the Notifications